ಆದಿಯಲ್ಲಿ ವೇದ್ಯ ಶಿವಸಂಪತ್ತಿನ ಮಹಾಘನ ಲಿಂಗಪ್ರಾಣ ಸಹಜದಲ್ಲಿ ಉದಯವಾದ ಸಂಗನಬಸವ ನಮೋ ಸಂಗನಬಸವ ನಮೋ ! ಚೆನ್ನಸಂಗನ ಬಸವಿದೇವಂಗೆ ಅಪ್ರತಿಮಂಗೆ ಪ್ರತಿಯಿಲ್ಲ. ಆ ಧರ್ಮವೆ ಧರ್ಮ. ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣನು ಉಪಮಾತೀತನಯ್ಯಾ.