Pages(key to [[Help:Page Status{{!}}Page Status]])
ಆದಿಯಾಧಾರವ ಮುಟ್ಟದ ನಾದ ಬಿಂದು ಕಳಾತೀತನ ಕಂಡೆನು ಅದು ಆದಿ ಮಹಾಘನಲಿಂಗ ನೋಡಾ. ಅದು ಎನ್ನಂಗ ಪ್ರಾಣದಲ್ಲಿ ನಿಂದು ಲಿಂಗ ಜಂಗಮವಾಯಿತ್ತು ನೋಡಾ. ಲಿಂಗವೆ ಅಂಗವಾಗಿ ಜಂಗಮವೆ ಪ್ರಾಣವಾಗಿ ಪರಶಿವಕಳೆಯೆ ಕಾರಣವಾಗಿಪ್ಪ ಲಿಂಗಾಂಗಿಯ ಮಾಹೇಶ್ವರನೆಂಬೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.