ಆದಿಯಾಧಾರವಾಗಿಹುದೇ ಘನ
ಆ ಘನವ ವೇದಿಸಿದುದೇ ಮನ; ಮನವು ಮಹದಲ್ಲಿ ನಿಂದುದೆ ಭಕ್ತಿ
ಭಿನ್ನಭಾವಕ್ಕಿಚ್ಛೆದೋರದಿಹುದೆ ಆಚಾರ
ತಟ್ಟು ಮುಟ್ಟು ತಾಗು ನಿರೋಧವಿಲ್ಲದಿಹುದೆ ಪೂಜೆ
ಆಸೆ ರೋಷ ಹರುಷವಿಲ್ಲದಿಹುದೆ ಪ್ರಸಾದ
ಕರಣಮಥನಕ್ಕಿಚ್ಛೆ ತೋರದಿಹುದೆ ಅನುಭಾವ. ಇಂತೀ ಸರ್ವಾಂಗದಲ್ಲಿ ಸಾಹಿತ್ಯವಾದ ನಿಜೈಕ್ಯಂಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯಾ.