ಆದಿಲಿಂಗ
ಅನಾದಿ ಶರಣ ಎಂಬುದು ತನ್ನಿಂದ ತಾನಾಯಿತ್ತು ಕೇಳಿರಣ್ಣಾ; ಆದಿ ಕಾಯ
ಅನಾದಿ ಪ್ರಾಣ ಎಂಬ ಉಭಯದ ಭೇದವ ತಿಳಿದು ವಿಚಾರಿಸಿ ನೋಡಿರಣ್ಣಾ. ಅನಾದಿಯ ಪ್ರಸಾದ ಆದಿಗೆ ಸಲುವುದು. ಅನಾದಿ ಜಂಗಮಶ್ಚೈವ ಆದಿಲಿಂಗಸ್ಥಲಂ ಭವೇತ್ ಅನಾದೇಸ್ತು ವಿರೋಧೇನ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ ಇದನರಿದು ಪ್ರಾಣಪ್ರಸಾದ ವಿರೋಧವಾಗಿ ಪಿಂಡಪ್ರಸಾದವ ಕೊಂಡಡೆ ಕಿಲ್ಬಿಷ ನೋಡಾ ಕೂಡಲಚೆನ್ನಸಂಗಮದೇವಾ.