ಆದಿಶೂನ್ಯಂ ಮಧ್ಯಶೂನ್ಯಂ ಅಂತ್ಯಶೂನ್ಯಂ ನಿರಾಮಯಂ ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮ ಉಚ್ಯತೇ ಆ ನಿರವಯಸ್ಥಲವು ಉರಿಯುಂಡ ಕರ್ಪುರದಂತಿದ್ದಿತ್ತು; ಇಂತಿದು ನಿರವಯಸ್ಥಲವಯ್ಯಾ ಕೂಡಲಚೆನ್ನಸಂಗಮದೇವಾ.