ವಿಷಯಕ್ಕೆ ಹೋಗು

ಇಷ್ಟಲಿಂಗಾರ್ಪಣವಾವುದು, ಪ್ರಾಣಲಿಂಗಾರ್ಪಣವಾವುದು, ಭಾವಲಿಂಗಾರ್ಪಣವಾವುದುಯೆಂದರೆ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಇಷ್ಟಲಿಂಗಾರ್ಪಣವಾವುದು
ಪ್ರಾಣಲಿಂಗಾರ್ಪಣವಾವುದು
ಭಾವಲಿಂಗಾರ್ಪಣವಾವುದುಯೆಂದರೆ ಹೇಳಿಯೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಶರೀರವೆ ಸಮರ್ಪಣ. ಪ್ರಾಣಲಿಂಗಕ್ಕೆ ಮನವೆ ಸಮರ್ಪಣ. ಭಾವಲಿಂಗಕ್ಕೆ ತೃಪ್ತಿಯೆ ಸಮರ್ಪಣ. ಶರೀರವೆಂದರೆ ರೂಪು
ಮನವೆಂದರೆ ರುಚಿ
ತೃಪ್ತಿಯೆಂದರೆ ಸಂತೋಷ. ಈ ತೆರನನರಿದು ಲಿಂಗಕ್ಕೆ ಸಮರ್ಪಿಸಿ ಪ್ರಸಾದವ ಭೋಗಿಸಬಲ್ಲಾತನೇ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಿಯೆಂದು ಹೇಳಲ್ಪಟ್ಟಿತ್ತಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.