ವಿಷಯಕ್ಕೆ ಹೋಗು

ಊಟದ ದೆಸೆಯಿಂದ ಹೆಚ್ಚಿ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಊಟದ ದೆಸೆಯಿಂದ ಹೆಚ್ಚಿ ಉಡಿಗೆ ತೊಡಿಗೆಯ ಮೇಲೆ ಮೆರೆವಾತನನು ಕಂಡು
ರೂಪು ಲಾವಣ್ಯ ಸುಖಭೋಗಿಗಳೆಂಬರಯ್ಯ. ಈ ಲೋಕದ ಮಾನವರು ಸುಖಿಗಳಾದರೆ ತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ? ಮಾಯಾ ಮೋಹವೆಂಬ ಮೊಲನಾಗರು ಹಿಡಿದು ಬಿಡದು ನೋಡಾ. ಸುಖಿ ಸುಖಿಗಳೆಂಬ ಈ ಲೋಕದ ಕಾಕುವಿಚಾರವನೇನೆಂಬೆನಯ್ಯ?. ಭಕ್ತಿಯೇ ರೂಪು
ನಿತ್ಯವೇ ಲಾವಣ್ಯ
ಮುಕ್ತ್ಯಂಗನೆಯ ಕೂಡಿ ಸುಖಿಸುವುದೇ ಸುಖ. ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೇ ಭೋಗ. ಇಂತಪ್ಪ ನಿರಂಗಸಂಗಿಗಳು ಅವಲೋಕದಲ್ಲಿಯೂ ಇಲ್ಲ ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.