ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೆ ಮುಖವಾಗಿ ಕಾಡಿ ನೋಡೆನ್ನನು ಬೇಡಿ ನೋಡೆನ್ನನು ಬೇಡದಿದ್ದಡೆ ಅಯ್ಯಾ ನಿಮಗೆ ಪ್ರಮಥರಾಣೆ. ನೀನಾವ ಮುಖದಲ್ಲಿ ಬಂದು ಬೇಡಿದೊಡೀವೆನು. ಕೂಡಲಸಂಗಮದೇವಾ.