ಎನ್ನ ಎನ್ನ ಕಾಯದ

ವಿಕಿಸೋರ್ಸ್ದಿಂದ



Pages   (key to Page Status)   


ಎನ್ನ ಕಾಯದ ಕಠಿಣವ ಕಳೆಯಯ್ಯ
ಎನ್ನ ಜೀವನುಪಾದ್ಥಿಯನಳಿಯಯ್ಯ
ಎನ್ನ ಪ್ರಾಣಪ್ರಪಂಚುವ ತೊಲಗಿಸಯ್ಯ
ಎನ್ನ ಭಾವದಭ್ರಮೆಯ ಕೆಡಿಸಯ್ಯ
ಎನ್ನ ಮನದ ವ್ಯಾಕುಲವ ಮಾಣಿಸಯ್ಯ
ಎನ್ನ ಕರಣೇಂದ್ರಿಯಗಳ ಕಷ್ಟಗುಣವ ನಾಶಮಾಡಯ್ಯ
ಎನ್ನೊಳಗೆ ನಿಮ್ಮ ಕರುಣಾಮೃತವ ತುಂಬಯ್ಯ ಗುರುವೇ ಅಖಂಡೇಶ್ವರಾ.