ಎನ್ನ ಭಕ್ತಿ ಎಲವದ ಕಾಯಫಲದಂತೆ ನೋಡಯ್ಯಾ ಹೊರಗೆ ಹೆಂಪು ಒಳಗೆ ಬೂರವಯ್ಯಾ ನಿಮ್ಮ ದೇವರೆಂದು ಪೂಜಿಸಿ ಮಾನವರೆಂದು ಮರೆವೆನು. ಸಗುಣ ನಿರ್ಗುಣವೆರಡೂ ಅಳವಡದ ಸಂದೇಹಿ ನಾನಯ್ಯಾ. ಕೂಡಲಸಂಗಮದೇವಾ ಎನ್ನ ಅಪರಾಧವ ಸೈರಿಸುವಡೆ ನೀವಲ್ಲದೆ ಮತ್ತಾರನೂ ಕಾಣೆ ಶರಣಾರ್ಥಿ ಶರಣಾರ್ಥಿ ಕೃಪೆಯಿಂದ ಕರುಣಿಸಿರಯ್ಯಾ.