ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ ಎನ್ನಯ್ಯಾ ನಿಮ್ಮನರಸುತ್ತಿದ್ದೇನೆ ಎನ್ನಯ್ಯಾ ಕೀಟಧ್ಯಾನದಲ್ಲಿ ನಿಮ್ಮನರಸುತ್ತಿದ್ದೇನೆ. ಎನ್ನಯ್ಯಾ ಕೂಡಲಸಂಗಮದೇವಾ ಭ್ರಮರದ ಲೇಸಿನಂತೆ ಕಾರುಣ್ಯವ ಮಾಡು ತಪ್ಪೆನ್ನದು ತಪ್ಪೆನ್ನದು ಶಿವಧೋ ಶಿವಧೋ.