ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು ಬೀಜಕ್ಷೇತ್ರದೆರಕ ಹರಿಹರಯೋಗ. ವಿರತರತಿ ನಿಕ್ಷೇಪವಿದುವೆ ಗರ್ಭಾದಾನ. ಪರಮಬೀಜಾವಾಪವಿದರ ಫಲನಿರ್ವಾಣ ! ಸರಸಲಿಂಗದ ನಿಷೇಕವನರಿವುದೆ ಸಾಜ ಗುರುವೆ ಕರುಣಿಸಿದ ಶಿವಲಿಂಗಕಮಲಾರ್ಚನೆಯನು. ಇದು ಗುಹ್ಯ ಗುಹೇಶ್ವರಾ.