ಎಲ್ಲರಂತಲ್ಲ
ನೋಡಿರೆ
ನನ್ನ
ನಲ್ಲ.
ಬಲ್ಲಿದ
ನಾರಾಯಣ
ಬ್ರಹ್ಮರ
ಕೂಡೆ
ಮೆಲ್ಲನೆ
ಸೇವೆಯ
ಕೊಂಬನು.
ಖುಲ್ಲ
ದನುಜರನೆಲ್ಲ
ನಿಲ್ಲದೆ
ಸಂಹರಿಸಿದನು.
ಕಲ್ಲುಕಲ್ಲಲಿ
ಹೊಡೆಸಿಕೊಂಡನು.
ಭಕ್ತಿಗೆ
ಮೆಚ್ಚಿ
ಬಿಲ್ಲಲಿ
ಹೊಯಿಸಿಕೊಂಡನು.
ಭಾವಕ್ಕೆ
ಮೆಚ್ಚಿ
ಸೊಲ್ಲಿಗೆ
ಸೋತು
ಶಿಶುವಾದನು
ಅಮ್ಮವ್ವೆಗೆ.
ಮಲ್ಲಮಲ್ಲರ
ಗಂಡನೆಂಬ
ಬಿರುದು
ನೋಡಿರೆ
ನಮ್ಮ
ಅಖಂಡೇಶ್ವರನೆಂಬ
ನಲ್ಲನಿಗೆ.