Pages(key to [[Help:Page Status{{!}}Page Status]])
ಒಡಲುಗೊಂಡು ಹುಟ್ಟಿದ ಘಟ್ಟಕ್ಕೆ ಅಷ್ಟೋತ್ತರಶತವ್ಯಾಧಿ. ಅದಕ್ಕೆ ನಾನಾ ಔಷಧಿಯ ತಂದು ಹೊರೆವರು ಆ ಪರಿಯ ನಾನದ ಹೊರಿಯೆನು. ಅದೇನು ಕಾರಣವೆಂದೆಡೆ : ಭವರೋಗವೈದ್ಯ ಭವಹರನೆಂಬ ಬಿರಿದು ನಿಮ್ಮದಾಗಿ. ಇದು ಕಾರಣ ಕೂಡಲಸಂಗಮದೇವಾ ನಿಮ್ಮ ಪುರಾತನರ ಪ್ರಸಾದವಲ್ಲದೆ ಕೊಂಡಡೆ ನಿಮ್ಮಾಣೆ.