ಒಲ್ಲೆನೆಂದೆಡೆ ಅದೆ ಭಂಗ ಒಲಿವೆನೆಂದಡೆ ಅದೇ ಭಂಗ. ಒಲ್ಲೆ ಒಲಿವೆನೆಂಬೆರಡನು ಅಳಿದು ತೃಪ್ತನಾದೆನೆಂದಡೆ ಅದೇ ಕೊರತೆ. ಕೂಡಲಚೆನ್ನಸಂಗಯ್ಯ ಭಕ್ತಾಧೀನನಾಗಿ ಇಲ್ಲಿಗೆ ನಡೆದು ಬಂದ ಬಳಿಕ ಉಪಚಾರ ಉಂಟೆ ಅಯ್ಯಾ ?