ಕಟ್ಟುವೆನುಪ್ಪರಗುಡಿಯ ಜಗವರಿಯೆ: ಮಾಡುವೆನೆನ್ನ ಕಾಯ ಕೆಡೆವನ್ನಕ್ಕ ಬೇಡುವುದೆನ್ನ ತನುಮನಧನವ. ಬೇಡಲಾರದ ಹಂದೇ ನೀ ಕೇಳಾ ಈ ಬಿರಿದು ಸಂದಿತ್ತು ಕೂಡಲಸಂಗಮದೇವಾ.