ಕಡೆಯಿಲ್ಲದ ದೇಶವ ತಿರುಗಿದೆನು ಹವಣಿಲ್ಲದ ಕಂಥೆಯ ತೊಟ್ಟೆನು ಹಸಿವಿಲ್ಲದ ಕಪ್ಪರವ ಹಿಡಿದು ಭಕ್ತಿಭಿಕ್ಷವ ಬೇಡ ಬಂದೆನು. ಗುಹೇಶ್ವರ ಹಸಿದನು ಉಣಲಿಕ್ಕು ಏಳಾ ಸಂಗನಬಸವಣ್ಣಾ.