ವಿಷಯಕ್ಕೆ ಹೋಗು

ಕತ್ತಲಮನೆಯಲ್ಲಿರ್ದ ಮನಜನು, ಜ್ಯೋತಿಯನೆನಿತು

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕತ್ತಲಮನೆಯಲ್ಲಿರ್ದ ಮನಜನು
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ ಬೆಂಕಿಯ ಹೊತ್ತಿಸದನ್ನಕ್ಕ ? ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ ಹತ್ತಿ ಹರಿಯದನ್ನಕ್ಕ ? ಹುಟ್ಟುಗುರುಡನು ಕಷ್ಟಪಟ್ಟು
ಎಷ್ಟುಹೊತ್ತು ನಡೆದಡೆಯೂ ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ ? ಹಾಂಗೆ
ಸಮ್ಯಗ್‍ಜ್ಞಾನಾತ್ಮಕವಾದ ಲಿಂಗಾರ್ಚನ
ಲಿಂಗನಿರೀಕ್ಷಣ
ಲಿಂಗಧ್ಯಾನಗಳಿಲ್ಲದೆ
ಆ ನೆನಹು
ನಿರೀಕ್ಷಣೆ
ಪೂಜೆ ಇವುಗಳೊಂದೊಂದೆ ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವನು ?