ಕತ್ತೆಗೇಕಯ್ಯ ಕಡಿವಾಣ ತೊತ್ತಿಗೆ ತೋಳಬಂದಿಯೇಕಯ್ಯ? ಶ್ವಾನಗೇಕೆ ಆನೆಯ ಜೋಹವಯ್ಯ? ಹಂದೆಗೇಕೆ ಚಂದ್ರಾಯುಧವಯ್ಯ? ಶಿವನಿಷೆ*ಯಿಲ್ಲದವಂಗೆ ವಿಭೂತಿ ರುದ್ರಾಕ್ಷಿ ಶಿವಮಂತ್ರ ಶಿವಲಿಂಗವೆಂಬ ಶಿವಚೋಹವೇತಕಯ್ಯ ಇವರಿಗೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.