ವಿಷಯಕ್ಕೆ ಹೋಗು

ಕಬ್ಬಿನ ಹೊರಗಣ ಸೋಗೆಯ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಬ್ಬಿನ ಹೊರಗಣ ಸೋಗೆಯ ಮೆದ್ದು ಪರಿಣಾಮಿಸುವ ಪಶುವಿನಂತೆ
ಹೊರವೇಷವ ಹಲ್ಲಣಿಸಿಕೊಂಡು ಈಶ್ವರೋವಾಚದ ನುಡಿಯ ನುಡಿದು ಬಲ್ಲವರೆನಿಸಿಕೊಳಬಹುದಲ್ಲದೆ
ಈಶ್ವರನ ನಿಲವ ಈ ಉಪಚಾರದಲ್ಲಿ ಕಾಣಬಹುದೆ? ಕಾಣಬಾರದು ಕಾಣಿರಯ್ಯ. ಕಬ್ಬ ಕಡಿದು ಒಳಗಣ ಮಧುರವ ಸ್ವೀಕರಿಸುವ ಮದಗಜದಂತೆ ಅಂತರಂಗದ ನಿಳಯದಲಿ ನಿಜವ ಕಂಡು ನಿವಾಸಿಗಳಾಗಿ ಚಿದಂಗ ಚಿತ್ಪ್ರಾಣ ಚಿಚ್ಛಕ್ತಿ ಚಿದಾಕಾಶವೆನಿಸುವ ಚಿದ್ಫ ್ರಹವೇ ಸ್ಥಳಕುಳವೆಂದರಿದು ಸುಳಿಯಬಲ್ಲರೆ ಸ್ಥಲಜ್ಞರೆಂಬೆ. ಉಳಿದವರೆಲ್ಲಾ ಹುಸಿ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.