ಕರಿಯ ಕಾಮಿನಿಯ ಉದರದಲ್ಲಿ ಧರೆ ಈರೇಳಿಪ್ಪವು ನೋಡಾ. ಹರಿ ಹತ್ತನು ಹೊತ್ತು ನಡೆವುತ್ತಿಪ್ಪಳು ನೋಡಾ. ಆಕೆಯ ಶಿರದಲ್ಲಿ ಸಿಂಹ
ಹೃದಯದಲ್ಲಿ ಕರಿ
ಸರ್ವಾಂಗದಲ್ಲಿ ಭಲ್ಲುಕ ನೋಡಾ. ಶಿರದಲ್ಲಿ ಶಿವಕಳೆ
ಹೃದಯದಲ್ಲಿ ಪರಮಕಳೆ
ಸರ್ವಾಂಗದಲ್ಲಿ ಸರ್ವಜ್ಞಾನವರ್ಮಕಳೆ ಉದಯವಾಗಲು ಶಿರದ ಸಿಂಹ ಸತ್ತು
ಹೃದಯದ ಕರಿಯಳಿದು ಸರ್ವಾಂಗದಲ್ಲಿ ತೊಡರಿದ ಭಲ್ಲೂಕ ಬಿಟ್ಟು ಸರ್ವಜ್ಞ ನಿನಗೆ ನಾನು ಭಕ್ತನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.