ಕಾಮದಿಂದ ಕರಗನು ಕ್ರೋಧದಿಂದ ಕೊರಗನು. ಲೋಭ ಮೋಹಂಗಳಿಂದತಿ ನೋವನಲ್ಲ ನೋಡಾ ಭಕ್ತನು. ಮದ ಮತ್ಸರಗಳಿಂದ ಬೆದಬೆದನೆ ಬೇವವನಲ್ಲ; ಅಹಂಕಾರ ಮಮಕಾರಗಳಿಂದ ಮತಿಮಂದನಲ್ಲ ನೋಡಾ ಭಕ್ತನು ಆಕಾರ ನಿರಾಕಾರ ಏಕವಾದ ಏಕಮೇವ ಪರಬ್ರಹ್ಮವು ತಾನೇ ನೋಡಾ ಭಕ್ತನು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.