ಕಾಯದ ಕೈಯಲ್ಲಿ ಕರಸ್ಥಲ ಪ್ರಾಣದ ಕೈಯಲ್ಲಿ ಜಂಗಮಸ್ಥಲ ಈ ಉಭಯಭಾವದ ಶಿವಲಿಂಗಾರ್ಚನೆ ಪರಮಾನಂದಸುಖಸ್ಥಲ. ಕಾಯ ಭಕ್ತ ಪ್ರಾಣ ಜಂಗಮ ಆವುದ ಘನವೆಂಬೆನಾವುದ ಕಿರಿದೆಂಬೆ ಕೂಡಲಸಂಗನ ಶರಣರು ಬಂದಡೆ ಉಪಚಾರಕ್ಕೆ ಇಂಬಿಲ್ಲ ಕರುಣದಿಂದ ಬರಹೇಳಾ ಅಪ್ಪಣ್ಣಾ.