ಅನಾಹತಮಹೇಶ್ವರನೆಂಬಾತಂಗೆ, ಪ್ರಸಾದಸ್ಥಲದ ಪ್ರಸಾದಾಶ್ರಯದ

ವಿಕಿಸೋರ್ಸ್ದಿಂದ



Pages   (key to Page Status)   


ಅನಾಹತಮಹೇಶ್ವರನೆಂಬಾತಂಗೆ
ಪ್ರಸಾದಸ್ಥಲದ ಪ್ರಸಾದಾಶ್ರಯದ ಭವಿತ್ವವ ನೀಕರಿಸಿ ಪ್ರಸಾದವನು ನೆಲೆಗೊಳಿಸಿ; ಅನ್ಯಥಾ ಪವನ ಆಧಾರ ಆಶ್ರಯವ ನೀಕರಿಸಿ ದ್ವಿಜ ಪ್ರಜ ತ್ರಜವೆಂಬ ಡಿಂಬ ಮತ್ರ್ಯಕ್ಕೆ ಕಳುಹಿದಿರಿ ಬಸವಣ್ಣನನು. ಮಡಿ ಮಡಿವಾಳನನು ಒಡನೆ ಕಳುಹಿದಿರಿ. ಕನ್ನಡಿಯಾಗಿ ಭವಕ್ಕೆ ಬಾರದಂತೆ ಭಾವವ ನಿಲಿಸಿದಿರಿ. ಬಳಿಕ ಲಿಂಗಸ್ಥಲ
ಜಂಗಮಸ್ಥಲ
ಪ್ರಸಾದಸ್ಥಲ ನಿರ್ಧರವಾದವು. ಚಿರಕಾಲದಲ್ಲಿ ಮಹಾಸುನಾದಗಣ
ಅನಾಹತನಾದಗಣ ಸಂಪೂರ್ಣನಾಗಿಪ್ಪನಯ್ಯಾ ಕೂಡಲಚೆನ್ನಸಂಗಾ
ನಿಮ್ಮ ಶರಣ ಬಸವಣ್ಣನು !