ವಿಷಯಕ್ಕೆ ಹೋಗು

ಅಯ್ಯಾ, ಪಿಂಡಬ್ರಹ್ಮಾಂಡದ ಮಧ್ಯದಲ್ಲಿ,

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಯ್ಯಾ
ಪಿಂಡಬ್ರಹ್ಮಾಂಡದ ಮಧ್ಯದಲ್ಲಿ
ಭಕ್ತನೆಂಬ ವೃಕ್ಷವಾಗಿ ಚಿದಂಡವಿರ್ಪುದು. ಆ ಚಿದಂಡದ ಮಧ್ಯದಲ್ಲಿ ಜಂಗಮವೆಂಬ ಬೀಜವಾಗಿ ಚಿನ್ಮಯಾಂಡವಿರ್ಪುದು. ಆ ಎರಡರ ಮಧ್ಯದಲ್ಲಿ ಸತ್ಕ್ರಿಯೆ ಸಮ್ಯಕ್‍ಜ್ಞಾನ ಮಹಾಜ್ಞಾನವೆಂಬ ಚಿತ್ಸೂರ್ಯ ಚಿದಗ್ನಿ ಚಿಚ್ಚಂದ್ರಮಂಡಲವಿರ್ಪುದು. ಆ ಮಂಡಲದ ಮಧ್ಯದಲ್ಲಿ ಏಕಾದಶ ದಿಕ್ಕುಗಳಿರ್ಪುವು. ಆ ದಿಕ್ಕುಗಳ ಮಧ್ಯದಲ್ಲಿ ಲಕ್ಷದಳ ಕಮಲವಿರ್ಪುದು. ಆ ಕಮಲದಳಂಗಳಲ್ಲಿ ಲಕ್ಷ ಲಿಂಗಗಳಿರ್ಪುವು. ಆ ಲಿಂಗಂಗಳಂಗುಷಾ*ಗ್ರದಲ್ಲಿ ಲಕ್ಷ ಗಂಗೆಗಳಿರ್ಪುವು. ಆ ಗಂಗೆಗಳ ಮಧ್ಯದಲ್ಲಿ ಲಕ್ಷ ಪ್ರಣವಂಗಳಿರ್ಪುವು ನೋಡಾ. ಆ ಪ್ರಣವಂಗಳ ಮಧ್ಯದಲ್ಲಿ ಬಸವ ಮೊದಲಾದ ಮಹಾಶರಣಗಣಂಗಳು ಪರಿಪೂರ್ಣವಾಗಿ ಮೂರ್ತಗೊಂಡಿರ್ಪರು ನೋಡಾ. ಇಂತು ಪ್ರಮಥಗಣಂಗಳು ನೆರೆದಿರ್ದ ಸ್ವಸ್ವರೂಪದ ನಿಲುಕಡೆಯನರಿಯದೆ
ಕೊಟ್ಟಿದನವ ದೊಡ್ಡ ವೃಕ್ಷಕ್ಕೆ ಕಟ್ಟಿದಂತೆ
ಅಂಗದ ಮೇಲೆ ಲಿಂಗವ ಕಟ್ಟಿಕೊಂಡು ಸುಳಿವಾತ ಜಂಗಮವಲ್ಲ
ಆ ಜಂಗಮಕ್ಕೆ ತನಮನಧನಂಗಳ ಕೊಟ್ಟು ಅವರಡಿಯಿಂದ ಹುಟ್ಟಿದ ಜಲಶೇಷವ ಕೊಂಬಾತ ಭಕ್ತನಲ್ಲ. ಇಂತು
ಉಭಯಾಂಧಕ ಭಕ್ತಜಂಗಮಕುಲವಳಿದು ಪ್ರಮಥರಾಚರಿಸಿದ ಸನ್ಮಾರ್ಗದಲ್ಲಿ ಸುಳಿಯಬಲ್ಲಾತ ಜಂಗಮ. ಆ ಜಂಗಮದನುವರಿದು ಅಡಗಬಲ್ಲಾತ ಭಕ್ತ. ಇದು ಕಾರಣ
-ಕೂಡಲಚೆನ್ನಸಂಗಯ್ಯಾ ಇಂತಪ್ಪ ಭಕ್ತ ಜಂಗಮರ ಪಾದವ ತೋರಿ ಬದುಕಿಸಯ್ಯಾ ಗುರುವೆ.