ಖುರಾನ್
ಖುರಾನ್ ಅಂತ್ಯಪ್ರವಾದಿ ಮುಹಮ್ಮದ್ (ಸ)ರಿಗೆ ಅವತೀರ್ಣಗೊಂಡ ಕಟ್ಟಕಡೆಯ ದೈವಿಕ ಗ್ರಂಥವಾಗಿದೆ. ಕುರಾನ್ ಮುಸ್ಲಿಮರಿಗೆ ಮಾತ್ರವಿರುವ ಒಂದು ಗ್ರಂಥವಲ್ಲ.
- "ಮಾನವರಿಗೆ ಸಾಧ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಲಗೊಂಡಿರುವ "ಕುರಾನ್" ಅವತಿರ್ಣಗೊಂಡ ತಿಂಗಳು "ರಮಝಾನ್" ಆಗಿರುತ್ತದೆ..."
[ಕುರಾನ್: 2: 185]
ನಿಶ್ಚಯವಾಗಿಯೂ ಇದು (ಕುರಾನ್) ಸರ್ವಲೋಕದ ಪ್ರಭುವಿನಿಂದ ಅವತೀರ್ಣಗೊಳಿಸಲ್ಪಟ್ಟಿದೆ. ರೂಹುಲ್ ಅಮೀನ್ (ಜಿಬ್ರೀಲ್ [ಅ]) ಇದನ್ನು ನಿಮ್ಮ ಹೃದಯಕ್ಕೆ ನೀವು ಮುನ್ನೆಚ್ಚರಿಕೆ ಕೊಡುವವಾರಾಗಲೆಂದು ತಂದಿರಿಸಿದ್ದಾರೆ. ಇದು ಅರಬೀ ಭಾಷೆಯಲ್ಲಿದೆ. ಮತ್ತು ಇದರ (ಕುರಾನ್) ಕುರಿತು ಹಿಂದಿನ ದಿವ್ಯಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
[ಕುರಾನ್, 26: 192-196]
ತನ್ನ ದಾಸನಿಗೆ ಸತ್ಯಾಸತ್ಯತೆಯನ್ನು ಬೇರ್ಪಡಿಸಿ ತಿಳಿಸುವ (ಕುರಾನ್)ನ್ನು ಅವತೀರ್ಣಗೊಳಿಸಿದ ಅಲ್ಲಾಹನು ಅತ್ಯಂತ ಸಮೃದ್ದನು. ಈ ಮೂಲಕ ಅವರು ಸಮಸ್ತ ಜನ ಕೋಟಿಗೆ ಮುನ್ನೆಚ್ಚರಿಕೆ ಕೊಡುವವರಾಗಲೆಂದು.
[ಕುರಾನ್, 25: 1]
ಇಲ್ಲ, ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆ ಇಟ್ಟು ಹೇಳುತ್ತಿರುವೆನು ನೀವು ಅರಿತಿದ್ದರೆ ಖಂಡಿತವಾಗಿಯೂ ಇದೊಂದು ಮಹಾ ಆಣೆಯಾಗಿದೆ. ಖಂಡಿತವಾಗಿಯೂ ಇದು ಆದರೆಣೀಯ ಕುರಾನ್ ಆಗಿದೆ. ಇದು ಸುರಕ್ಷಿತವಾಗಿ ಕಾಪಾಡಲಾಗುವ ಒಂದು ದಾಖಲೆಯಲ್ಲಿದೆ. ಪರಿಶುದ್ದಿಯನ್ನು ನೀಡಲಾದವರ ಹೊರತು ಯಾರೂ ಇದನ್ನು ಸ್ಪರ್ಶಿಸಲಾರರು ಇದು ಸರ್ವಲೋಕಗಳ ಪ್ರಭುವಿನಿಂದ ಅವತೀರ್ಣಗೊಂಡಿರುವುದಾಗಿದೆ.
ಕುರಾನಿನ ಒಂದು ಚಾಲೆಂಜ್?
ಓ ಪ್ರವಾದಿಗಳೇ! ಹೇಳಿರಿ: ಈ ಕುರಾನ್'ಗೆ ಸಮಾನವಾದ ಒಂದನ್ನು ರಚಿಸಿ ತರಲು ಮನುಷ್ಯರು ಮತ್ತು ಜಿನ್ನ್'ಗಳು ಒಟ್ಟುಗೂಡಿದರೂ ಸಹ ಅವರಿಂದ ಸಾಧ್ಯವಿಲ್ಲ. ಅವರು ಪರಸ್ಪರ ಸಹಕರಿಸಿದರೂ ಸರಿ.
[ಕುರಾನ್, 17: 88]
ಕುರಾನ್ ನ ರಕ್ಷಣೆಯ ಜವಾಬ್ದಾರಿ ಅಲ್ಲಾಹನು ವಹಿಸಿಕೊಂಡಿದ್ದಾನೆ
ನಿಸ್ಸೇಂದೇಹವಾಗಿಯೂ ನಾವೇ ಈ ಗ್ರಂಥವನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಖಂಡಿತವಾಗಿಯೂ ನಾವೇ ಇದನ್ನು ಸಂರಕ್ಷಿಸುತ್ತೇವೆ.
[ಕುರಾನ್]