ಗಿಳಿಯ ಹಂಜರವಿಕ್ಕಿ ಸೊಡರಿಂಗೆಣ್ಣೆಯನೆರೆದು ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವಾ. ತರಗೆಲೆ ಗಿರಿಕೆಂದಡೆ ಹೊರಗನಾಲಿಸುವೆ; ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ. ಕೂಡಲಸಂಗಮದೇವನ ಶರಣರು ಬಂದು ಬಾಗಿಲ ಮುಂದೆ ನಿಂದು `ಶಿವಾ' ಎಂದಡೆ ಸಂತೋಷ ಪಟ್ಟೆನೆಲೆಗವ್ವಾ. 375