ಗುರು-ಲಿಂಗ-ಜಂಗಮವೆಂಬ ಭೇದವನೆ ಕಳೆದು ಗುರು ಲಿಂಗವ ಏಕವ ಮಾಡಿ ತೋರಿದನಾಗಿ ತನು ಮನ ಪ್ರಾಣ ಮೊದಲಾಗಿಪ್ಪ ಕರಣೇಂದ್ರಿಯಂಗಳನು ತನು ಮುಟ್ಟಿದ ಸುಖಂಗಳನು ಲಿಂಗಕ್ಕೆ ಕೊಟ್ಟು ಅದ ಬಗೆಗೆತ್ತಿ ಬಿಚ್ಚಿ ಬೇರೆ ಮಾಡ ಕೂಡಲಚೆನ್ನಸಂಗಾ ಲಿಂಗೈಕ್ಯನು.