ಗುರು ಮುಟ್ಟಿ ಲಿಂಗವಾಯಿತ್ತೈಸೆ ಅದು ಬಿದ್ದಿತ್ತು ಹೋಯಿತ್ತೆಂಬ ಅಜ್ಞಾನವ ನೋಡಾ ಕಟ್ಟುವಠಾವನು ಮುಟ್ಟುವ ಭೇದವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ