ಗುರುಜಂಗಮದ ಪಾದತೀರ್ಥವೆ ಪವಿತ್ರವೆಂದು

ವಿಕಿಸೋರ್ಸ್ದಿಂದ



Pages   (key to Page Status)   


ಗುರುಜಂಗಮದ
ಪಾದತೀರ್ಥವೆ
ಪವಿತ್ರವೆಂದು
ತಿಳಿದು
ಲಿಂಗಾಭಿಷೇಕಂಗೆಯ್ವುದಯ್ಯಾ.

ಗುರುಲಿಂಗ
ಜಂಗಮದಲ್ಲಿ
ಭೇದವ
ಕಲ್ಪಿಸಿದಡೆ
ಪಾಪವು
ಸಂಘಟಿಸುವುದಯ್ಯಾ.
ಮನುಷ್ಯನ
ಕಾಲ್ದೊಳೆದ
ನೀರು
ಪರಮತೀರ್ಥವೆಂದು
ಭಾವಿಸಿ
ಲಿಂಗಕ್ಕೆರೆವುದು
ಶಾಸ್ತ್ರಾಚಾರಕ್ಕೆ
ವಿರೋಧ_
ಎಂಬ
ಕುಹಕಿಗಳ
ಕೀಳ್ನುಡಿಯ
ಕೇಳಲಾಗದಯ್ಯಾ.
ಗುರುರ್ಲಿಂಗಜಂಗಮಶ್ಚ
ತ್ರಿತಯಂ
ಚೈಕಮೇವ
ಹಿ
ಅತ
ಏವ
ಪದೋದಾಭಿಷೇಚನಂ
ಶಿವಲಿಂಗಕೇ
ಕುರ್ವಂತ್ಯಭೇದದೃಷ್ಟ್ಯಾ

ಭೇದಕೃತ್ಪಾಪಮಶ್ನುತೇ
ಎಂದುದಾಗಿ
ಇಂತಿಪ್ಪುದನಾರಯ್ಯದೆ
ಗಳಹುವ
ಮಂದಮತಿಗಳ
ಎನ್ನತ್ತ
ತೋರದಿರಯ್ಯಾ
ಕೂಡಲಚೆನ್ನಸಂಗಮದೇವಾ.