ಗುರುವ ಬಿಟ್ಟವಂಗೆ ಲಿಂಗವಿಲ್ಲ ತನುವಿರಹಿತವಾಗಿ ಪ್ರಾಣವಿಲ್ಲ ಕಂಗಳುವಿರಹಿತವಾಗಿ ನೋಡಲಿಲ್ಲ ಸತ್ಯವಿರಹಿತವಾಗಿ ಭಕ್ತಿಯಿಲ್ಲ. ಈ ಭೇದಕಸ್ಥಲವನರಿಯದಿದ್ದಡೆ ಭಕ್ತಜಂಗಮವನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ