ಗುರುವನು ಮಹಾದೇವನನು ಒಂದೇಯೆಂದು ಭಾವಿಸಲು ಬೇಕು ನೋಡಾ. ಎರಡೆಂಬ ಪ್ರತಿಭಾವ ತೋರದಡೆ ಅದು ಅಜ್ಞಾನ ನೋಡಾ. ಇದು ಕಾರಣ ಅವನಾನೊರ್ವನು ಎರಡೆಂದು ಭಾವಿದನಾದಡೆ ಅನೇಕಕಾಲ ನರಕದ ಕುಣಿಯಲ್ಲಿಪ್ಪುದು ತಪ್ಪದು ನೋಡಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.