ಚಿತ್ತ ಬುದ್ಧಿ ಅಹಂಕಾರ

ವಿಕಿಸೋರ್ಸ್ದಿಂದ



Pages   (key to Page Status)   


ಚಿತ್ತ ಬುದ್ಧಿ ಅಹಂಕಾರ ಹುಟ್ಟದಂದು
ಮನ ಜ್ಞಾನ ಭಾವಂಗಳುತ್ಪತ್ತಿಯಿಲ್ಲದಂದು
ಜ್ಞಾತೃ ಜ್ಞಾನ ಜ್ಞೇಯಂಗಳು ಹುಟ್ಟದಂದು
ಜ್ಞಾನ ಸುಜ್ಞಾನ ಮಹಜ್ಞಾನವೆಂಬ
ವೃತ್ತಿಜ್ಞಾನಂಗಳಿಲ್ಲದಂದು
ಅಖಂಡ ಪರಿಪೂರ್ಣ ಅದ್ವಯ ನಿಃಕಲ ನಿಜಜ್ಞಾನಮೂರ್ತಿ ನೀನೆಯಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.