ಜಂಗಮ ಪ್ರಸಾದದಿಂದ ಲಿಂಗಕ್ಕೆ ಚೈತನ್ಯಸ್ವರೂಪವೆಂದರಿದು
ಪಾದೋದಕದಿಂದ ಲಿಂಗಕ್ಕೆ ಮಜ್ಜನವೆಂದರಿದು
ಜಂಗಮ ಪ್ರಸಾದವೆ ಲಿಂಗಕ್ಕೆ ಅರ್ಪಿತವಾಗಿ
ಲಿಂಗದಿಂದ ನೋಡುತ್ತ
ಕೇಳುತ್ತ
ರುಚಿಸುತ್ತ
ಮುಟ್ಟುತ್ತ
ವಾಸಿಸುತ್ತ
ಕೂಡುತ್ತ
ಅಹಂ ಮಮತೆಗೆಟ್ಟು
ಸಂದು ಸಂಶಯವರತು
ಹಿಂದ ಮುಂದ ಹಾರದಿಪ್ಪುದೇ ನಿಜವೀರಶೈವ. ಇಂತಲ್ಲದೆ ಉಳಿದುದೆಲ್ಲವು ಇತರ ಶೈವ ಕಾಣಾ. ಕೂಡಲಚೆನ್ನಸಂಗಮದೇವಾ.