ವಿಷಯಕ್ಕೆ ಹೋಗು

ಜಂಗಮದ ಗುಣವನು, ಜಂಗಮದ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಜಂಗಮದ ಗುಣವನು
ಜಂಗಮದ ಭೇದವನು ಜಂಗಮದ ರೂಪವನು ಹೇಳಿಹೆ ಕೇಳಿರಣ್ಣ. ಜಂಗಮವೆಂದರೆ ಪರಮಜ್ಞಾನ ಸ್ವರೂಪನು. ಒಂದಿನ ಉಂಟಾಗಿ
ಒಂದಿನ ಇಲ್ಲ[ವಾಗಿಪ್ಪ] ಉಪಜೀವನಕನಲ್ಲ ಕಾಣಿರಣ್ಣ. ಉಪಾಧಿ[ಕ]
ನಿರೂಪಾಧಿಕನೆಂಬ ಸಂದೇಹಭ್ರಾಂತನಲ್ಲ ಕಾಣಿಭೋ. ಸತ್ತು ಚಿತ್ತಾನಂದಭರಿತನು. ಭಕ್ತನ ಪ್ರಾಣವೇ ತಾನಾಗಿಪ್ಪ ನಿತ್ಯ ಪರಿಪೂರ್ಣನೆ
ಜಂಗಮದೇವನೆಂದರಿಯಲು ಯೋಗ್ಯ ಕಾಣಿಭೋ. ಆ ಘನ ಚೈತನ್ಯವೆಂಬ ಜಂಗಮವ ಮನೋಭಾವದಲ್ಲಿ ಆರಾಧಿಸಿ ಸುಖಿಯಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.