ಜಂಗಮವೆ ಪರವೆಂದರಿದಡೇನು
ಆ ಜಂಗಮದಂಗವಲ್ಲವೆ ಲಿಂಗ ? ಆ ಲಿಂಗಚೈತನ್ಯದರಿವೆಲ್ಲವು ಜಂಗಮವಲ್ಲವೆ ? ಅಂಗವಿಲ್ಲದ ಜೀವಕ್ಕೆ
ಆತ್ಮನಿಲ್ಲದ ಅಂಗಕ್ಕೆ
ಸರ್ವಭೋಗದ ಸುಖವುಂಟೆ ? ಮಣ್ಣಿಲ್ಲದೆ ಮರನುಂಟೆ ? ಮರನಿಲ್ಲದೆ ಹಣ್ಣುಂಟೆ? ಹಣ್ಣಿಲ್ಲದೆ ಸ್ವಾದವುಂಟೆ ? ಹೀಂಗರಿವುದಕ್ಕೆ ಕ್ರಮ: ಅಂಗವೇ ಮಣ್ಣು
ಲಿಂಗವೇ ಮರನು
ಜಂಗಮವೇ ಫಲವು
ಪ್ರಸಾದವೆ ರುಚಿಯು. ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಸಾಕಾರಲಿಂಗವೆ ಜಂಗಮದಂಗವಯ್ಯಾ ಪ್ರಭುವೆ