ವಿಷಯಕ್ಕೆ ಹೋಗು

ತತ್ತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ

ವಿಕಿಸೋರ್ಸ್ದಿಂದ


Title vachana saahitya
Author Tomtada Siddalingeshwara ShivaYogigaLu
Year 1550-1600 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತತ್ತ್ವಾತತ್ವವೆಂಬ ಮಿಥ್ಯಾ ಛಾಯೆಯಿಲ್ಲದ ಬಚ್ಚಬರಿಯ ಬಯಲ ಬಣ್ಣ ಶೃಂಗರಿಸಿ ಪರತತ್ತ್ವವಾಯಿತ್ತು ನೋಡಾ. ಆ ಪರತತ್ತ್ವ ತನ್ನ ಶಕ್ತಿ ಸಾಮಥ್ರ್ಯದಿಂದ ವಿಭಜಿಸಿ ಅಂಗ ಲಿಂಗವಾಯಿತ್ತು ನೋಡಾ. ಅಂಗವೆಂದರೆ ಶರೀರ; ಲಿಂಗವೆಂದರೆ ಪ್ರಾಣ. ಇದು ಕಾರಣ ಶರಣ ಲಿಂಗಕ್ಕೆ ಭಿನ್ನವೆಲ್ಲಿಯದು? ಭೇದವೆಲ್ಲಿಯದು ಬಿಡಾ ಮರುಳೆ. ಶರಣನೇ ಲಿಂಗವೆಂಬುದು ಸತ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.