ತನತನಗೆ ಕುಳ್ಳಿರ್ದು ಮನಸಿಗೆ ಬಂದಂತೆ ಘನಲಿಂಗದ ವಾರ್ತೆಯ ಗಳಹುತಿಪ್ಪರು ನೋಡಾ ! ಗುರುಕಾರುಣ್ಯವ ಹಡೆಯದೆ ಸ್ವರಬಿಂದುಗಳ ತಡೆಯದೆ ಹರನ ಶರಣರ ಮುಂದೆ ಹಿರಿದು ಮಾತನಾಡುತಿಪ್ಪರು ನೋಡಾ ! ಇರಿಯದೆ ಮೆರೆವರು ಅರಿಯದೆ ಉಳಿವರು ಕೂಡಲಚೆನ್ನಸಂಗಯ್ಯನಲ್ಲಿ ಜನಜಂಗುಳಿಗಳು