ತನು ಮನ ಧನಕ್ಕೆ ಆಸೆಮಾಡುವಾತನ ಬಸವಣ್ಣನ ಸಂತತಿಯೆಂತೆನಬಹುದು? ವಧುವಿಂಗೆ ಆಸೆ ಮಾಡುವರನು ಬಲ್ಲಾಳನ ಸಂತತಿಯೆಂತೆನಬಹುದು? ಮಕ್ಕಳಿಗೆ ಆಸೆ ಮಾಡುವರ ಸಿರಿಯಾಳನ ಸಂತತಿಯೆಂತೆನಬಹುದು? ಎನಲಾಗದು ಎನಿಸಿಕೊಳಲಾಗದು. ಎಂದಾತಂಗೆಯೂ ಎನಿಸಿಕೊಂಡಾತಂಗೆಯೂ ನರಕ ತಪ್ಪದು ಕೂಡಲಚೆನ್ನಸಂಗಮದೇವಾ.