ತಾನೆ ಜಗ ಜಗವೆಲ್ಲ ತಾನೆಂದರಿದ ಘನವೇದ್ಯನಭೇದರೂಪನಾಗಿ ಅನ್ಯವಿಲ್ಲದನ್ಯವನರಿಯಲೆಲ್ಲಿಯದೊ ? ನಿರಂಜನ ನಿಜಚಿದ್ರೂಪು ತಾನಾಗಿ ಅರಿವು ತಾನೆಂಬ ಮಾತಿಗೆಡೆಯಲ್ಲಿಯದೊ ? ಅನ್ಯವೆನ್ನದ ತಾನೆನ್ನದಳಿದುಳಿಮೆಯನುಪಮಿಸಬಹುದೆ ? ಅನಪಮಸುಖಸಾರಾಯ ಕೂಡಲಚೆನ್ನಸಂಗಾ ನಿಮ್ಮ ಶರಣ.