ವಿಷಯಕ್ಕೆ ಹೋಗು

ತಾನೆನ್ನದೆ ಇದಿರೆನ್ನದೆ ಏನೂ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ತಾನೆನ್ನದೆ ಇದಿರೆನ್ನದೆ ಏನೂ ಏನೂ ಎನಲಿಲ್ಲದ ಅನಿರ್ವಾಚ್ಯವಾಗಿದ್ದ ವಸ್ತು ತನ್ನ ಲೀಲೆಯಿಂ ತಾನೆ ಸ್ವಯಂಭುಲಿಂಗವಾಗಿತ್ತು. ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ ಆ ಶಿವಶಕ್ತ್ಯಾತ್ಮಕದಿಂದಾಯಿತ್ತು ವಿಶ್ವ. ಆ ವಿಶ್ವಪ್ರಪಂಚದಿಂದಾದುದು ಸಂಸಾರ. ಆ ಸಂಸಾರವ ತನ್ನ ವಿವೇಕದಿಂ ವಿಚಾರಿಸಿ ತಾನಾರಿದೆಲ್ಲಿಯದೆಂದು ವಿಡಂಬಿಸಿ ಗುರುಸನ್ನಿಧಿಯ[ಲ್ಲಿ]
ಗುರು ಹಸ್ತಮಸ್ತಕ ಸಂಯೋಗದಿಂ ಮಹಾಲಿಂಗವ ಕರತಳಾಮಳಕವಾಗಿ ಕರ ಮನ ಭಾವದಲ್ಲಿ ಪ್ರತಿಷಿ*ಸಿ ತೋರಲು ಪರಮಾನಂದವನೆಯ್ದಿ; ಆ ಲಿಂಗದಲ್ಲಿ ಆಚಾರ ವಿಡಿದು ಭಕ್ತ
ಪೂಜೆವಿಡಿದು ಮಾಹೇಶ್ವರ
ಅರ್ಪಿತವಿಡಿದು ಪ್ರಸಾದಿ
ಅನುಭಾವವಿಡಿದು ಪ್ರಾಣಲಿಂಗಿ
ಆನಂದವಿಡಿದು ಶರಣ
ಸಮರಸವಿಡಿದು ಐಕ್ಯ_ಇಂತು ತಾನೆಲ್ಲವಾಗಿ
ಎಲ್ಲವೂ ತಾನಾಗಿ ಒಳಹೊರಗೆನ್ನದೆ
ಇಹಪರವೆನ್ನದೆ ಸರ್ವವೂ ತಾನಾದ ಮಹಾಜ್ಞಾನಿ ಶರಣನ ಸುಳುಹೆ ಜಗತ್ಪಾವನವಯ್ಯಾ
ಕೂಡಲಚೆನ್ನಸಂಗಮದೇವಾ.