ತುದಿ ಮೊದಲಿಲ್ಲದ ಘನವ ನೋಡಾ ಒಳಹೊರಗಿಲ್ಲದಿಪ್ಪ ಅನುವ ನೋಡಾ ಗುರುಲಿಂಗಜಂಗಮ ತಾನೆಯಾಗಿ ಮತ್ತೆ ತಾನೆಂಬುದೇನೂ ಇಲ್ಲದ ಪರಿಯ ನೋಡಾ ! ತನ್ನ ತಾನಿರ್ದೆಸೆಯ ಮಾಡಿಕೊಂಡು ನಿಜಪದವನೆಯ್ದಿಪ್ಪ ಪರಿಯ ನೋಡಾ. ಕೂಡಲಚೆನ್ನಸಂಗಮದೇವರಲ್ಲಿ ಪ್ರಸಾದಿಯಾಗಿಪ್ಪ ಮರುಳಶಂಕರದೇವರ ನಿಲವ ನೋಡಾ !