ತ್ರಿವಿಧವನಿತ್ತು ರೂಹು ಮಾತು ಬಳಿಕುಂಟೆ ಅಯ್ಯಾ ತನುವ ಕೊಡೆನಾಗಿ ಇದಿರುತ್ತರವಿದೆ ಮನವ ಕೊಡೆನಾಗಿ ಆನೆಂಬಹಂಕಾರವಿದೆ ಧನವ ಕೊಡೆನಾಗಿ ಪ್ರಪಂಚಿನ ಬಳಕೆಯಿದೆ. ಕೂಡಲಸಂಗಮದೇವಯ್ಯಾ ಎಂತು ಭಕ್ತನಪ್ಪೆನು !