ಧರೆ ಗಗನವೆಂಬುದ ನಾನರಿಯೆನಯ್ಯಾ ಲಿಂಗಮಧ್ಯೇ ಜಗತ್ಸರ್ವವೆಂಬುದ ನಾನರಿಯೆನಯ್ಯಾ ಲಿಂಗಸುಖದ ಸೋಂಕಿನೊಳಗೆ ಶಿವಶಿವಾ ಎನುತಿರ್ದೆನಯ್ಯ ಕೂಡಲಚೆನ್ನಸಂಗಯ್ಯಾ ಅಂಬುಧಿಯೊಳಗೆ ಬಿದ್ದ ಆಲಿಕಲ್ಲಂತೆ ಭಿನ್ನಭಾವವಿಲ್ಲದೆ ಶಿವಶಿವಾ ಎನುತಿರ್ದೆನಯ್ಯಾ.