ನಮಗೆ ನಮ್ಮ ಲಿಂಗದ ಚಿಂತೆ ನಮಗೆ ನಮ್ಮ ಭಕ್ತರ ಚಿಂತೆ ನಮಗೆ ನಮ್ಮ ಆದ್ಯರ ಚಿಂತೆ ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ?