ನರರಿಗೆಯ್ದೆ ಗುರುವಪ್ಪ ಹಿರಿಯರು ನೀವು ಕೇಳಿರೆ ! ನಿಮ್ಮ ಗುರುತನ ಕೆಟ್ಟು ಶಿಷ್ಯನ ಶಿಷ್ಯತನವ ಕೆಡಿಸಬಲ್ಲರೆ ಅವರ ಹಿರಿಯರೆಂಬೆ ಕೂಡಲಚೆನ್ನಸಂಗಮದೇವಾ