ನಾರಾಯಣ ತನ್ನ ಲೋಕದಲ್ಲಿ ಮಾಡಿದ ಮಂಟಪದಂತಲ್ಲ ಇಂದ್ರ ನಿಜವನದಲ್ಲಿ ಮಾಡಿದ ಮಂಟಪದಂತಲ್ಲ ವೀರಭದ್ರ ಭೀಮಾದ್ರಿಯಲ್ಲಿ ರಚಿಸಿದ ಪೂಜಾಮಂಟಪದಂತಲ್ಲ. ಇಲ್ಲಿರ್ಪ ಮಂಟಪದ ಉದಯವ ನೋಡಿದಡೆ ಇದರ ವಿಸ್ತಾರ ಅರಿದಯ್ಯಾ ಕೂಡಲಚೆನ್ನಸಂಗಮದೇವಾ