ವಿಷಯಕ್ಕೆ ಹೋಗು

ನಾವೂ ಮನುಷ್ಯರು!/ನಾಟಕ

ವಿಕಿಸೋರ್ಸ್ದಿಂದ

ನಾವೂ ಮನುಷ್ಯರು !

ನಾಟಕ

ಮೊದಲ ಪ್ರದರ್ಶನ:೭–೧೧–೧೯೪೪ರಂದು,ಮಂಗಳೂರು ಜನತಾ ರಂಗಭೂಮಿ ಆಶ್ರಯದಲ್ಲಿ, ಈಗ ನೆಹರೂ ನಾಮಾಂಕಿತವಿರುವ ಮಂಗಳೂರು

ನಗರ ಮೈದಾನದಲ್ಲಿ

ಪಾತ್ರಗಳು

ರಾಮಣ್ಣ

ಹಂಚಿನ ಕಾರ್ಖಾನೆ ಕಾರ್ಮಿಕ

ರುಕ್ಕು

ರಾಮಣ್ಣನ ಹೆಂಡತಿ: ಹಂಚಿನ ಕಾರ್ಖಾನೆ ಕೂಲಿ

ಕಿಟ್ಟು

ಅವರ ಸಣ್ಣ ಮಗ

ಧನ ಕಾಮತ್

ಬಾಡಿಗೆ ವಸೂಲಿ ಮನುಷ್ಯ

ಲಸ್ರಾದೋ

ನೇಕಾರ

ಕಾರ್ಮಿಕ ಸ೦ಘದ ಕಾರ್ಯದರ್ಶಿ

ಆದ೦ ಸಾಹೇಬ್

ಬೀಡಿ ಕೆಲಸಗಾರ


ನಿರ್ದೇಶನ

ನಿರ೦ಜನ

o

ಹಂಚಿನ ಕಾರ್ಖಾನೆಯ ಕೆಲಸಗಾರ ರಾಮಣ್ಣನ ಗುಡಿಸಲು. ಹೊಟ್ಟೆನೋವು,

ಕಫ ಪೀಡಿತನಾಗಿ ರಾಮಣ್ಣ ಮಣ್ಣಿನ ತಿಟ್ಟೆಯ ಮೇಲೆ ಹಾಸಿದ ಹರಕು

ಚಾಪೆಯಲ್ಲಿ ಒಂದು ಹೊದಿಕೆ ಹೊದ್ಡುಕೊ೦ಡು ಮಲಗಿದ್ದಾನೆ. ನಾಟಕ

ಆರಂಭವಾದಾಗ ಕಾಣುವುದು ಈ ದೃಶ್ಯ.

ಸ್ವಲ್ಪ ಹೊತ್ತು ಮೌನ....ಕೆమ్ము.... "ಅಯ್ಯೋ" ನರಳುವಿಕೆ....

ಹತ್ತಿರದಲ್ಲಿರುವ ಮಣ್ಣಿನ ಪಾತ್ರವನ್ನು ಅಲ್ಲಾಡಿಸಿ ನೋಡುವನು.

ರಾಮಣ್ಣ :

ಥೂ! ನೀರೂ ಮುಗಿದುಹೋಯಿತು....ಯಾರಪ್ಪ ಈಗ

ಒಳಗಿಂದ ತರುವುದು? ರಾಮಾ! ಲಕ್ಷ್ಮಣಾ!....ಸೀತೆ!

ಸಾವಿತ್ರಿ!....ನಮ್ಮರುಕ್ಕುವಾದರೂ ಬರಬಾರ್ದೆ....ಬಯ್ಯ

ಆಯಿತು ಇಷ್ಟರಲ್ಲೇ-

(ಮೆల్లನೆ ಎದ್ದು, ಹೊದಿಕೆ ಸರಿಸಿ, ಕೆಳಕ್ಕೆ ತೆವಳಲು ನೋಡು

ವನು. ಕೃಶವಾದ ದೇಹ. ಮುಖ ಕಳೆಗು೦ದಿದೆ. ಗಡ್ಡ

బందిದೆ....ಮೈಮೇಲೆ ಅ೦ಗವಸ್ತವಿಲ್ಲ....ಸೊ೦ಟದಲ್ಲೊಂದು

ಸಣ್ಣ ಬಟ್ಟೆ....ಕೆಮ್ಮುವನು.)

(ರುಕ್ಕು ಒಳಬರುವಳು. ಕೈಯల్లి బుತ್ತಿಯ ಪಾತ್ರ....ಕೆಂಪು

ಬಣ್ಣದ ನೂಲಿನ ಸೀರೆ ಉಟ್ಟಿದ್ದಾಳೆ....ಇನ್ನೊಂದು ಕೈಯಲ್ಲಿ

ಬಂಗುಡೆ ಕಟ್ಟು.)

ರುಕ್ಕು:

ಕೂತಲ್ಲಿ ಕೂತುಕೊಳ್ಲಿಕ್ಕೂ ಆಗುವುದಿಲ್ವೊ ನಿಮಗೆ?

ರಾಮಣ್ಣ:

ಹಾo!

(ಬಾಯ್ತೆರೆದು)

ಹೆಸರು ಎತ್ತಿದ್ದೇ ಎತ್ತಿದ್ದು ಬಂದೇ ಬಿಟ್ಲಲ್ಲ! ಪಡ್ಡ

ಆಯ್ತು....ನೂರು ವರ್ಸ ಇಡೀ ಬದುಕ್ಲಿಕ್ಕೆ ಉಂಟಲ್ಲ

ಮಾರಾಯ್ತಿ ನೀನಿನ್ನು!

ರುಕ್ಕು:

(ಬುತ್ತಿ ಪಾತ್ರೆಯನ್ನು ಮೂಲೆಯಲ್ಲಿರಿಸಿ)

ನಿಮ್ಗೆ ಹೆದರಿಕೆ ಅಂತ ತೋರ್ಥದೆ ನಾನು ನೂರು ವರ್ಸ

ಬದುಕಿದ್ರೆ?....

ರಾಮಣ್ಣ :

ಹೆದರಿಕೆ ಎಂಥದು ಇವತ್ತೋ ನಾಳೆಯೋ ಸಾಯುವವ್ನಿಗೆ -

ಆದರೆ ಸ್ವಲ್ಪ -....

ರುಕ್ಕು:

ನೋಡಿ - ಈಗ ನಿಲ್ಲಿಸ್ತೀರೋ ಇಲ್ವೋ ನಿಮ್ಮ ಚಿರಿ ಚಿರಿ?

ರಾಮಣ್ಣ:

ಅಲ್ವೆ? ಸ್ವಲ್ಪ ನೀರಾದ್ರೂ ಬೇಕೋ ಬೇಡ್ವೋ ಇಲ್ಲಿ?

(ರುಕ್ಕು ಹತ್ತಿರ ಹೋಗಿ ಮಣ್ಣಿನ ಪಾತ್ರ ಎತ್ತುವಳು...

ರಾಮಣ್ಣ ಅವಳ ಕೈಯಲ್ಲಿದ್ದ ಬಂಗುಡೆ ಕಟ್ಟು ನೋಡುವನು.)

ಎಷ್ಟು ತಂದಿಯೇ ಇವತ್ತು ?

ರುಕ್ಕು:

(ನೆಟ್ಟಗೆ ನಿಂತು - ಒಂದು ಕೈಯಲ್ಲಿ ಬುತ್ತಿ ಪಾತ್ರೆ,

ಇನ್ನೊಂದರಲ್ಲಿ ಬಂಗುಡೆ....)

ಹೆಚ್ಚಿಲ್ಲಾಂದ್ರು... ಕೆಲಸ ಬಿಟ್ಕೂಡ್ಲೆ ಮಾರ್ಕೆಟಿಗೆ ಓಡ

ಬೇಕೂಂತಿದ್ದೆ...... ಮತ್ತೆ ಸೀತ ತಂದ್ಕೊಟ್ಲು...

ರಾಮಣ್ಣ:

ಓಹೋ! ಸೀತ ತಂದ್ಕೊಟ್ಲು ! ನೀನು ಯಾಕೆ

ಹೋಗ್ಲಿಲ್ಲ?...... ಹಾಗಾದರೆ ಇಷ್ಟು ಹೊತ್ತು ಏನು

ಮಾಡಿದಿ? ಯಾರ ಒಟ್ಟಿಗೆ ಇದ್ದಿ?

ರುಕ್ಕು:

ನಿಲ್ಸೀಂದ್ರೆ ಒಮ್ಮೆ. ಯೂನಿಯನ್ ನವರು ಯಾರಾದರೂ

ಕೇಳಿದರೆ ಚಂದಾದೀತು

(ರಾಮಣ್ಣ ತಲೆ ಕೆಳ ಹಾಕುವನು)

ಇವತ್ತು ಮೀಟಿಂಗು ಇತ್ತೂಂತೇಳ್ತೇನೆ.

ರಾಮಣ್ಣ:

ಹಾಂ. ಹಾಗಾದರೆ ಸರಿ. ಮೊದಲೇ ಹೇಳ್ಲಿಕ್ಕೆ ಏನಾಗಿತ್ತು?

ಅಲ್ಲಾ, ಹೌದೊ ರುಕ್ಕು? ಯಾವಾಗ ನೀನು ಬುದ್ಧಿ

ಕಲಿಯುವುದು? ಮೂರು ತಿಂಗಳಾಯ್ತು ನಾವು

ಯೂನಿಯನ್ ಸೇರಿ. ಎರಡು ತಿಂಗಳಾಯ್ತು ನಾನು

ಚಾಪೆ ಹಿಡ್ದು. ಇನ್ನೂ ಬುದ್ಧಿ ಬರಲಿಲ್ವಲ್ಲ ನಿನಗೆ?

೪ / ನಾವೂ ಮನುಷ್ಯರು!
                         (ರುಕ್ಕು " ಹಿ ಹ್ಹಿ " ಎಂದು ನಗುತ್ತ ಒಳಗೆ ಹೋಗುವಳು.
                          ರಾಮಣ್ಣ ಕೆಮ್ಮುವನು. ರುಕ್ಕು ನೀರಿನೊಡನೆ ಬಂದು-)
                          ಸ್ವಲ್ಪ ಕುಡೀರಿ.
                         (ಎಂದು ಕುಡಿಸಿ, ಅವನನ್ನು ಹಾಗೆಯೆ ಒರಗಿಸಿ
                          ಮಲಗಿಸುವಳು.)

ರಾಮಣ್ಣ : ಹಾಂ. ಹೂಂ- ನೋಡುವ, ಹೇಳು ನೋಡುವ-

           ಏನಾಯ್ತು ಮೀಟಿಂಗ್ನಲ್ಲಿ? ಸಭೆ ದೊಡ್ದಿತ್ತೊ? ಯಾರೆಲ್ಲ
           ಲೆಕ್ಚರ್ ಕೊಟ್ರು?

ರುಕ್ಕು  : ಹೇಳ್ತೀನೀಂದ್ರೆ.....

           ( ಉತ್ಸಾಹದಿಂದ, ತಿಟ್ಟಿಯ ಒಂದು ಮೂಲೆಯಲ್ಲಿ ಕೂತು)
            ದೊಡ್ದ ಸಭೆ.... ಆ ಎರಡು ಗದ್ದೆ ತುಂಬ ಇದ್ರು- ಕೆಂಪು
            ಬಾವುಟ ಹಾಕಿದ್ರು....
            (ರಾಮಣ್ಣ ಕಣ್ಣರಳಿಸಿ ಕೇಳುವನು)

ರಾಮಣ್ಣ  : ಹುಂ, ಮತ್ತೆ? ರುಕ್ಕು  : ಮತ್ತೆ- ಮತ್ತೆ-

            ( ಙ್ಞಾಪಿಸಿಕೊಳ್ಳುವವಳಂತೆ)

ರಾಮಣ್ಣ  : ಹೂಂ, ಮತ್ತೆ ಏನಾಯಿತು? ರುಕ್ಕು  : ಲೆಕ್ಚರಿತ್ತು. ರಾಮಣ್ಣ  : ಓಹೋ..... ಮೀಟಿಂಗ್ನಲ್ಲಿ ಲೆಕ್ಚರು ಯಾವಾಗ್ಲೂ ಉಂಟು,

            ಅಲ್ಲಾ ಏನೂಂತ ಲೆಕ್ಚರು?.....

ರುಕ್ಕು  : ಓ- ಹಾಗೆಯೊ? ಜೋರು ಲೆಕ್ಚರು ಕೊಟ್ರು... ನೋಡೀ...

            ದೊರೆಗಳ ಎರಡು ಕಾರ್ಖಾನೆ ಬಿಟ್ಟು ಬೇರೆಯೋರೆಲ್ಲ
           ರೂಪಾಯಿಗೆ ರೂಪಾಯಿ ಯುದ್ಧ ಭತ್ತೆ ಕೊಡ್ತಾರಲ್ಲ?
            ಅದು ಸರಿ . ಆದರೆ ಈ ದೊರೆಗಳು ಕೂಡ ಕೊಡ್ಬೇಕೂಂತ.... 
                                                               ನಾವೂ ಮನುಷ್ಯರು!/೫


ರಾಮಣ್ಣ  : ಹೂ೦. ಸರಿ. ನನಗೆ ಗೊತ್ತಿತ್ತು.....ಉಪಾಧ್ಯಕ್ಷರು ಮತ್ತು
            ಕಾರ್ಯದರ್ಶಿ ಮಾತಾಡಿದ್ರಲ್ವೊ?  ಕೈ ಹೀಗೆ ಹೀಗೆ
            ಮಾಡಿ?
ರುಕ್ಕು    ; ಹೌದು, ಹೌದು.
ರಾಮಣ್ಣ  :  ಹೂಂ. ನೋಡು, ನನ್ಗೆ ಗೊತ್ತಿತ್ತು.....ಸಭೆಗೆ ಯಾರೆಲ್ಲ 
            ಬಂದಿರ್‍ಲಿಲ್ಲ ?
 ರುಕ್ಕು    : ನಾನು ಲೆಕ್ಕ ಮಾಡ್ತಾ ಕೂತದ್ದೂಂತ....  ತೋರ್‍ತದೆ 
              ಹುಂ?... ಯೂನಿಯನ್ ನಲ್ಲಿ ನಾವಿಲ್ಲಾಂತ ಕೆಲವರು 
             ಸೀದಾ ಹೋದ್ರು.ಮತ್ತೆ ಕೆಲವರು ಬೇಗ ಮಾರ್ಕೆಟಿಗೆ
             ಹೋಗಿ ಬಂಗುಡೆ ತೆಕ್ಕೊಂಡು ಮೀಟಿಂಗಿಗೆ ಬಂದ್ರು..ಸೀತ 
              ಹಾಗೇ ಮಾಡಿದ್ದು.....ನಾನು ಮೊದ್ಲೇ ಬಂದು ಕೂತೆ.....
ರಾಮಣ್ಣ   :(ಹಲ್ಲು  ಕಿರಿದು) 
              ಸರಿ, ಸರಿ. ನಿನಗೆ ಕೊಟ್ಟ ಬಂಗುಡೆಗೆ ಸೀತ ಎಷ್ಟು
             ವಸೂಲು ಮಾಡಿದ್ಲು?
ರುಕ್ಕು      : ಓಹೋ..ನನಗೆ ತಲೆಯೇ ಇಲ್ಲಾಂತ ತೋರ್‍ತದೆ 
               ನಿಮಗೆ ಯಾವಾಗಲೂ ಹಾಗೆಯೇ. ಮತ್ತೊಬ್ರ ವಿಷಯ
               ದಲ್ಲಿ ಅಪನಂಬಿಕೆ.... ಅಲ್ಲಾಂದ್ರೆ.. ಆ ಸೀತು, ಅಲ್ಲ ಹಿಂದೆ
               ನಾವು ಭಾರೀ ಲಡಾಯಿ ಮಾಡಿಕೊಂಡಿದ್ದೆವೂಂತ ಹೇಳ್ವ・・・
              ಈಗ ಯೂನಿಯನ್ ಆದ ಮೇಲೆ ನಾವೆಲ್ಲ ಒಂದೇಂತ  
               ಹೇಳಿದ್ರೆ..... ನಾಲ್ಕು ಬಂಗುಡೆ ಕೊಟ್ಟು ದುಡ್ಡು ತಕ್ಕೊಳ್ಲೇ
              ಇಲ್ಲ, ನಾಳೆ ಬಂಗುಡೆಯೇ ಬದಲಿ ಕೊಡೂಂತ ಹೇಳಿದ್ಲು.

ರಾಮಣ್ಣ  : ಹೂಂ... ಹೂಂ.... ಆಗ್ಲಿ. ಎಲ್ಲಾ ಒಳ್ಳೇದಕ್ಕೇ... ಏನು

              ಹೇಳಿದ್ರು ಭಾಷಣದಲ್ಲಿ? ...... ಅಯ್ಯೋ.... ಒಂದಿಷ್ಟು ತಲೆ
              ಯಲ್ಲಿ  ತುಂಬಿಸ್ಬಾರ್‍ದೋ ....... ವರ್ಷ ಮೂವತ್ತಾಯ್ತು
              ಎಮ್ಮೆಗೆ ಆದ ಹಾಗೆ (ಕೆಮ್ಮು)       
      ೬  / ನಾವೂ ಮನುಷ್ಯರು!
              ರುಕ್ಕು :  ನೋಡಿ ನೋಡಿ,  ಕೆಟ್ಟ ಮಾತು  ಹೇಳಬಾರ್ದು.......ಸತ್ಯ,
                        ಸತ್ಯ.ಕೆಮ್ಮು  ಬಂತೋ ಇಲ್ವೋ?
                        (ರಾಮಣ್ಣ ನಗುವನು-ಮತ್ತೂ ಕೆಮ್ಮು. ರುಕ್ಕು ಎದ್ದು ಅವನ 
                        ಬೆನ್ನು ಸವರುವಳು. ಶಾಂತವಾದ ಮೇಲೆ-)
              ರುಕ್ಕು :  ಅಧ್ಯಕ್ಷರು ಜೋರೇ.. ಹದಿನೆಂಟು ರೂಪಾಯಿ ಇದ್ದ -- 
                        ಹಂಚಿಗೆ ಎಪ್ಪತ್ತಾಯ್ತು, ನಮ್ಮ ನಾಲ್ಕಾಣೆ ಎಂಟಾಣೆ 
                        ಯಾದರೂ ಆಗುವುದು ಬೇಡ್ವೋ? ಆರುಮುಕ್ಕಾಲಿನ 
                        ಅಕ್ಕಿಗೆ ಆರಾಣೆಯಾಯಿತು; ನಮ್ಮ ಕೂಲಿ ಎರಡು 
                        ಪಟ್ಟಾದರೂ ಆಗಬೇಕೊ, ಬೇಡ್ವೊ?
             ರಾಮಣ್ಣ : ಮತ್ತೆ ಚಿಮಿಣಿ ಎಣ್ಣೆ, ಹುಳಿ, ಮೆಣಸು, ಬಟ್ಟೆ, ಕಟ್ಟಿಗೆ-
               ರುಕ್ಕು :  ಹೂಂ ಹೂಂ-ಎಲ್ಲಾ! ಹಿಡಿದದ್ದಕ್ಕೆ ಮುಟ್ಟಿದ್ದಕ್ಕೆ ಎಲ್ಲ
                         ವಿಪರೀತ ಕ್ರಯ ಆದ ಮೇಲೆ ನಾವು ಬದುಕಬೇಕೊ, 
                         ಬೇಡ್ವೊ? ನಾವು ಮನುಷ್ಯರು ಹೌದೋ ಅಲ್ಲವೋ 
                         ಅಂತ..ರೈಟರು ಮತು ದೊರೆ ಕಂಡಿಯ ಹತ್ರ ನಿಂತು
                         ನಮ್ಮನ್ನೆ  ನೋದಡ್ತಿದ್ರು....ನಾವೇನೂ   ಹೆದರ್ಲೇ ಇಲ್ಲ.
             ರಾಮಣ್ಣ : ನೀವು ಹೆಂಗಸ್ರು, ಯಾವಾಗಲೂ ಹಾಗೆಯೇ-ಹೆದರೋದು
                          ಯಾಕೇಂತ ಬೇಡ್ವೊ? ನಾವೇನಾದರೂ ಅವರಿಗೆ ವಿರುದ್ಧ
                          ಮಾತಾಡ್ತೇವೊ?.ನ್ಯಾಯವಾದ್ದು ಕೇಳ್ಲಿಕ್ಕೆ ಯಾರ  
                          ಹೆದ್ರಿಕೇಂತ? 
               ರುಕ್ಕು : ಮತ್ತೊಂದು ಗೊತ್ತುಂಟೋ ನಿಮ್ಗೆ...? ಇವತ್ತು ಉರ್ವ
                          ದಿಂದ ಒಬ್ಳು  ಬಂದಿದ್ಳು  ಯೂನಿಯನಿನವಳಂತೆ. ಅವಳ್ದು
                          ದೊಡ್ಡ ಲೆಕ್ಚರು  ನಮಗೆ...ಅವಳ ಗಂಡನೂ  ಬಂದಿದ್ದ... 
                          ಮೊದಲು ಅವನು ಬಹಳ ಕುಡೀತಿದ್ನಂತೆ, ಮತ್ತೆ 
                          ಅವನನ್ನು ಯೂನಿಯನಿಗೆ ಸೇ   ಕಂಡಾಬಟ್ಟೆ ಕಳ್ಳು
                          ಗಿಳ್ಳು  ಕುಡಿಯೋದನ್ನೆಲ್ಲ ನಿಲ್ಲಿಸಿ  ಬಿಟ್ಲಂತೆ ಆ ಹೆಂಡ್ತಿ.  
                                                       ನಾವೂ ಮನುಷ್ಯರು! / ೭
 ರಾಮಣ್ಣ : ಆಯ್ತಲ್ಲಿಗೆ! ಅವಳೇ ಯಜಮಾನ್ತೀಂತಾಯ್ತು ಹಾಗಾದರೆ.... 
             ಬದುಕಿದೆ. ಸದ್ಯಃ ನಾನೇನೂ ಕಳ್ಳು  ಕುಡಿಯೋದಿಲ್ಲವಲ್ಲ! 
            (ಕೆಮ್ಮು , ರುಕ್ಕು ಅವನ ಬೆನ್ನು ಸವರುವಳು.)
   ರುಕ್ಕು : ಹೌದೊ? ಈಗ ಮದ್ದಿಗೇನು ಮಾಡುವುದು? ನಾಳ್ದು
            ಶನಿವಾರ ದುಡ್ಡು ಸಿಕ್ತದೇಂತ ಹೇಳ್ವ...ಮತ್ತೆ ತರು 
            ವುದೋ...ಅಲ್ಲ....ಆ ನಾಲ್ಕಾಣೆ-
 ರಾಮಣ್ಣ : ಏನು? ಯೂನಿಯನಿಗೆ ಕೊಡ್ಲಿಕ್ಕಿರುವ ನಾಲ್ಕಾಣೆ 
             ಮದ್ದಿಗೊ? ಛೆ! ಛೆ! ನಾನು ಹುಷಾರಾಗಿದ್ದೇನೆ. ಇನ್ನು 
             ಒಂದು ಸರ್ತಿ ಮದ್ದು ತಂದ್ರೆ ಆಯ್ತು, ಮತ್ತೆ ಒಮ್ಮೆ
             ತಲೆ ಕೆಲಸಿಗೆ ಕೊಟ್ಟು ಕೆಲಸಕ್ಕೆ ಬರುವುದೇ. ನಮ್ಮ 
             ರೈಟರನ್ನು ನೋಡದೆ ಬಾಳ ಸಮಯ ಆಯ್ತು......
    ರುಕ್ಕು : (ಮುಖ ತಿರುಗಿಸಿ)
             ಅವನಿಗೆ ಪಾಪ......ಜೀವದಲ್ಲಿ ಜೀವ ಇಲ್ಲ. ಒಟ್ಟು
             ಹೇಗಾದರೂ ಮಾಡಿ ಯೂನಿಯನ್ ಮುರೀಬೇಕೂಂತ 
             ಆಗಿದೆ ಅವನಿಗೆ.
  ರಾಮಣ್ಣ : ಕಣ್ಣು ಹಾಕ್ಲಿಕ್ಕೂ ಪುರಸತ್ತಿಲ್ವೋ ಏನೊ ಈಗ?
     ರುಕ್ಕು : ಹೋದ ಅವ. ಕಣ್ಣು ಹಾಕುವವ ಮಣ್ಣು ತಿಂದ.....
              ಒಮ್ಮೆ ಮಾತಾಡ್ಲಿಕ್ಕೆ ಬರಲಿಯಂತೆ ನಮ್ಮಲ್ಲಿ ಯಾರ 
              ಹತ್ತಿರವಾದ್ರೂ, ಯೂನಿಯನಿಗೆ ಹೇಳಿ ಅವನಿಗೆ ತಕ್ಕ ಶಾಸ್ತಿ ಮಾಡಿಸ್ತೇವೆ. : 
   ರಾಮಣ್ಣ : ಭೇಷ್! ಇನ್ನು ನಾವು ಗಂಡಸ್ರು  ಮನೆಯಲ್ಲೇ  ಕೂತು 
               ನೀವು ತಂದದ್ದನ್ನುತಿಂದರಾಯ್ತು. ನೀವೂ ಯೂನಿಯನೂ
               ಇಬ್ರೇ ಎಲ್ಲಾ ಮಾಡ್ತೀರಿ. 
       ೮ / ನಾವೂ ಮನುಷ್ಯರು!


          ರುಕ್ಕು : (ತಮಾಷೆ ಮಾಡುತ್ತ) 
                 ಓಹೋಹೊಹೊ....ಯೂನಿಯನಂತೇಳಿದ್ರೆ ಗಂಡಸರೂ ಇಲ್ಲಾಂತ
                                 ತೋ....ಗಂಡಸ್ರೂ  ಹೆಂಗಸ್ರೂ ಎಲ್ಲಾ  
                                ಮಜೂರರೂ ಸೇರಿರುವ   ಸಂಘಟನೆ  ಯೂನಿಯನು.
                (ರಾಮಣ್ಣ ನಗುವನು.ಕೆಮ್ಮು. 
                 ರುಕು ಏಳುವಳು.)
         ರುಕ್ಕು :ಸಾಕು ಮಾತಾಡಿದ್ದು....ಹೊತು ಕಂತುತ್ತ್ ಬಂತು....
             ಸ್ವಲ್ಪ ಕಟ್ಟಿಗೆ ಎಲ್ಲಿಯಾದರೂ ಸಿಗ್ತದೋ ನೋಡೇನೆ....
             ಈ ಕಿಟ್ಟೂಎಲ್ಲಿಗೆ ಹೋದ್ನಪ್ಪ.  ನಾನು ಕೆಲಸಕ್ಕೆ
                         ಹೋದ ಮೇಲೆ ಹೊರಗೆ ಆಡಿದ್ದು ಸಾಕಾಗ್ಲಿಲ್ಲೋ
                        ಏನೋ! 
           (ಹೊರ ಹೋಗುವಳು.
           ರಾಮಣ್ಣ ಬಳಲಿದ ಧ್ವನಿಯಲ್ಲಿ “ಹೋಗು ಹೋಗು"
           ಎನ್ನು ವನು. 
          ಸ್ವಲ್ಪ ಹೊತ್ತು ನೀರವ. ರಾಮಣ್ಣ ಒರಗಿಕೊಳ್ಳುವನು.
          ಹೊರಗಿನಿಂದ "ರಾಮಣ್ಣ-ఓ ರಾಮಣ್ಣನವರೇ” ಎಂದು
                    ಕರೆಯುವ ಸ್ವರ.)
    ರಾಮಣ್ಣ : ಯಾರಪ್ಪಾ? ಬನ್ನಿ.... ಇದ್ದೆನೆ. 
         (ಲಸ್ಸಾದೋ ಒಳಗೆ ಬರುವನು. ಮಾಸಿದ ಬಟ್ಟೆ, ಕೊಳೆಯಾದ
                   ಕೋಟು, ಟೋಪ್ಪಿ, ಕೊರಳಲ್ಲಿ ಶಿಲುಬೆ....)
  ಲಸ್ರದೋ: ಹ್ಯ್ರಾಗಿದ್ದೀರಿ ರಾಮಣ್ಣ? 
  ರಾಮಣ್ಣ : ಹಾ–ಲಸ್ರದೋ ಪೊರ್ಬುಗಳೋ? ಬನ್ನಿ....ಇದ್ದೇನೆ
                ನೋಡಿ....ಗುಣ ಆಗ್ತ ಬಂತು. ಇನ್ನೂ ಸ್ವಲ್ಪ  ಕ್ಷೀಣ.... 
        ಬನ್ನಿ....ಇದರ ಮೇಲೆ ಕೂತ್ಕಳ್ಳಿ....ಹಾಗೆ
                                                                  ನಾವೂ ಮನುಷ್ಯರು! /೯
                       (ಲಸ್ಸಾದೋ ಕುಳಿತುಕೊಳ್ಳುವನು) 
            ಕೆಲ್ಸ ಬಿಟ್ಟು ಈ ಕಡೆ ಬಂದಹಾಗಿದೆ.
 ಲಸ್ರಾರ್:ಇಲ್ಲ ರಾಮಣ್ಣ..ಕೆಲಸಕ್ಕೆ ಹೋಗ್ಲೆ ಇಲ್ಲ.
 ರಾಮಣ್ಣ : ನೋಡಿ ಹಾ೦. ನಾನು ಅಂದಾಜು ಮಾಡಿದೆ.
       (ನಗುತ್ತ)
       ನಾವೆಲ್ಲಿಯಾದರೂ ಕೆಲಸಕ್ಕೆ ಹೋಗದಿದ್ರೆ ಯೂನಿಯನಿ
             ನವರು ಸಿಟ್ಟು ಮಾಡ್ತಾರೆ....ಒಬ್ಬ ಒಂದು ದಿನ ಕೆಲಸಕ್ಕೆ
           ಹೋಗದಿದ್ರೆ, ಅಷ್ಟು ಹಂಚು ತಯಾರಾಗುವುದಿಲ್ಲ....
      ಅದು ಯುದ್ಧಕ್ಕೆ ಹೋಗುವುದಿಲ್ಲ....ಮಳೆ ಬಂದು
           ಸೈನ್ಯಕ್ಕೆ ತೊಂದರೆಯಾಗ್ತದೆ. ಜಪಾನಿನವ ಬರಾನೆ.
ಲಾಸ್ರಾದೋ: ಹಾಂ! ಹಂಚು ಅಷು ಮುಖ್ಯವೊ? ಯುದ್ಧ ಮಾಡು 
              ವವರಿಗೆ ಬೇಕು ಅಲ್ಲವೊ? 
ರಾಮಣ್ಣ: ಹಾ೦, ಅದೇ ಹೇಳುವುದು....ನೋಡಿ. ನನಗೇನೋ ಇದು
            ಶುರು ಶುರುವಿಗೆ ತಮಾಷೆ ಕಣೀತ್ತು....ಮತ್ತೆ ಯೋಚ್ನ್ 
           ಮಾಡಿದ್ರೆ.... ಅದು ಸರಿ. ಅಲ್ಲೊ ಹೇಳಿ.ಎಲ್ಲರೂ
          ಇವತ್ತು ಬೇಡಾಂತ ಕೆಲಸ ನಿಲ್ಸಿದ್ರೆ ಹಂಚೇ ಆಗ್ಲಿಕ್ಕಿಲ್ಲ....
ಲಾಸ್ರಾದೋ: ಅಲ್ಲಾ ಅದ್ಸರಿ.
ರಾಮಣ್ಣ: ಹಾಂ ಹಾಂ ಅದೇ -ಯೂನಿಯನಿನವರು ಹೇಳೋದೇ
             ನಂದ್ರೆ ಓಡಾಂತ.ಮಾತ್ರ ఆల్ల-ನಿಮ್ಮ ಬಟೆ ಮಗ್ಗ  
             ಎಲ್ಲಾ ಹಾಗೇಂತ
            ಲಸ್ರಾದೋ ಟೊಪಿ ತೆಗೆದು ತಲೆಯ ಉಜುವನು....
      ಇಳಿವಯಸ್ಸು) 
      ಬಟ್ಟೆ ತಯಾರಿ ನಿಂತ್ರೆ ಈ ಕಷ್ಟಕಾಲದಲ್ಲಿ ಜನರಿಗೆ
            ಬಟೆ ಎಲ್ಲಿಂದ ಸಿಗಬೇಕು?ಜನರಿಗಾಗಿ ಹೆಚ್ಚು ತಯಾರು  
          ಮಾಡಬೇಕು? ಜನರಿಗಾಗಿ ಹೆಚ್ಚು ತಯಾರು
         ಮಾಡಬೆಕಪ್ಪ!ಕಮ್ಮಿಯಂತೊ ಮಾಡಲೇಬಾರದು! 
        (ಕೆಮ್ಮವನು) 
             ೧೦ / ನಾವೂ ಮನುಷ್ಯರು!
                 ಹಾಳು ಕೆಮ್ಮೊಂದು ತಿನ್ತದೆ  ನನ್ನನ್ನು.
    ಲಸ್ರಾದೋ:(ಗಂಟಲು ಸರಿಮಾಡಿಕೊಂಡು) 
        ನೀವು ಹೇಳಿದ್ದು ಸರಿ....ಆದ್ರೆ ನೋಡಿ...ನಾನು ಕೆಲ್ಸಕ್ಕೆ 
               ಹೋಗದ ಕಾರಣವೇ ಬೇರೆ. ಬಾಯಿಗೆ ತಿಂಗಳಾಯಿತು....
       ನೋವೂಂತ ಹೇಳ್ತಾಳೆ....ಏಳನೆ ಹೆರಿಗೆ...
      (ರಾಮಣ್ಣ 'ಮೊದಲು ಸಂತೋಷ ಸೂಚಿಸುವನು.. ಮಾತು
              ಮುಂದುವರಿದಂತೆ, ತುಟಿಮುಚ್ಚಿ ತಲೆಬಾಗಿಸಿ ನಿಟ್ಟುಸಿರು
              ಬಿಡುವನು.)
      ಕಳೆದ ಸಲವೇ ಕಷ್ಟವಾಗಿತ್ತು. ಈಗ ಯುದ್ಧಕ್ಕೆ ಹೋದ
             ಜೂನಿಯ ಸುದ್ದಿಯೂ ಇಲ್ಲ....ಅಳಿಯನ ಮನೆಯಿಂದ
           ಮಗಳ ವಿಚಾರ ಕಾಗದವೂ ಇಲ್ಲ. ಕಳೆದ ವರ್ಷ ಮಗು 
           ತೀರಿಕೊಂಡದ್ದು ద్చే ಬೇರೆ.ಒಟ್ಟು ದುಃಖ. ಏನೂ
            ಇಲ್ಲಾಂತೇಳ್ತ್ನೆನೆ ಜೀವದಲ್ಲಿ. ಯೇಸು ದೇವರು ಕಾಪಾಡ
            ಬೇಕು ನಮ್ಮನ್ನು....ಹೂ೦–
 ರಾಮಣ್ಣ:ಏನು ಮಾಡುವುದು ಹೇಳಿ? ಸ್ವಂತ ಬೆವರಿಳಿಸಿ, ಬೇಡಿ-
      ಕಾಡಿ ಕೂಲಿ ಸಂಪಾದಿಸಿ ಬದುಕುವವರಲ್ಲವೊ ನಾವು?
      ಇದೇನು ನಮ್ಮ ರಾಜ್ಯವೊ?
ಲಾಸ್ರಾದೋ:ಏನೋ ರಮಣ್ಣ....ಈಗೀಗ ನೀವು ಮಾತಾಡುವುದೆಲ್ಲ 
                ಹೊಸ್ಥಗಿ ಕಾಣೀದೆ. ಕೆಟ್ಟದೂಂತ ಅಲ್ಲ.ನನಗೇನೋ
               ಬಾಳ ವ್ಯಥೆ ಆಗ್ತ.ದೆ-ಸಂತೋಷವೂ ಆಗ್ರದೆ....ಬಾಯಿ
                  ರುಕ್ಮಕ್ಕನನ್ನು ಕೇಳೀದ್ಲು....

ರಾಮಣ್ಣ: ಹೇಳ್ತೀನೆ, ಹೇಳ್ತೀನೆ....ರುಕು ಹೆತ್ತದು ಒಂದೇ

           ಒಂದಾದ್ರೂ ಬೇರೆಯವರನ್ನು ಹೆರಿಸಲಿಕ್ಕೆ ಅವಳು 
            ಯಾವಾಗ್ಲೂ ತಯಾರೇ.ಖಂಡಿತ ಬಂದು ಹೋಗ್ತ್ಳಳೆ.                               
                                         ನಾವೂ ಮನುಷ್ಯರು! / ೧೧
                                          (“ಏಯ್! ಇದ್ಯೇನೋ?” ಎಂದು ಗದರಿಸುತ್ತ ಕಮಿ
                                        ಯವರು- ಧನಕಾಮತ್-ಬೆತ್ತ... ಬೀಸುತ್ತ ಒಳಬರುವರು. 
                    ನಾಲ್ವತ್ತರ ವಯಸ್ಸು. ಲಸ್ರಾದೋ ಎದ್ದು ನಿಲ್ಲುವನು.... 
                    ರಾಮಣ್ಣ ಏಳುವುದಿಲ್ಲ. ಅವನ ಮುಖಭಾವ ದೃಢ
                                       ವಾಗುವುದು.)
             ಧನ:ಏನು ಕೊಡೀಯೊ?....ಇವತ್ತು ತಾರೀಕು ಇಪ್ಪತ್ತಂಟು.
            ಒಂದನೇ ತಾರೀಕಿಗೆ ಮನೆ ಬಾಡಿಗೆ ಸಿಕ್ಕಲೇಬೇಕು.
            (ಲಸ್ರಾದೋ ನಮಸ್ಕರಿಸುವನು. ಕಮಿಥಿ ತಲೆಯಾಡಿಸಿ ರಾಮಣ್ಣ
                         ನನ್ನು ದುರದುರನೆ ನೋಡೆುವನು) 
            ಏನೋ?ಎದ್ದು ನಿಲ್ಲೋದಕ್ಕೂ ಆಗೋದಿಲ್ವ?....ಬಗ್ಗಿ
                        ನಮಸ್ಕಾರ ಮಾಡ್ಲಿಕ್ಕೂ ಸಾ ಧ್ಯಬ ಇಲೊ? ಅಬಾ!
            (ಬೆತ್ತದಿಂದ ನೆಲಕ್ಕೆ ಕುಟ್ಟವನು)....
          ನಿಮ್ಮ ಯೂನಿಯನಿಗೆ ಸೇರೀದ ಫಲವೊ ಇದು?ನಾನು
                    ಈ ಮನೆಯ ಧಣಿಯರ ಕಡೆಯಿಂದ ಬಂದವನು ಎಂಬುದೂ
                     ಮರಿಯೊ? ನಾಳೆ ನಾನು ನಿನ್ನ ಮಡಿಕೆ-ಕುಡಿಕೆ ಎಲ್ಲಾ
                     ತೆಗ್ದ್ದು ಹೊರಗೆ ಹಾಕ್ಥೆನೆ ನೋಡು....
    ರಾಮಣ್ಣ:(ನಂಜಿನಿಂದ)
      ನಮಸ್ಕರ ಸ್ವಮಿ....ಈ ನೆಲದ ಮೇಲೆ ಕೂತುಕೊಳ್ಳೂವ 
             ಕ್ರುಪೆ ತಾವು ತೋರಿಸದೆ ಇರುವಾಗ ನಾನು ಬಡವ
              ಯಾಕೆ ಏಳ್ಳೀ? ನಿಮ್ಗ ಬಾಡಿಗೆ ಕೊಟ್ಟು ಕೊಟ್ಟು ಈ
           ಸ್ಥಿತಿಗೆ ಬಂದಿದ್ದೇನೆ.ಆದ್ರೆ,ನಮಸ್ಕರ ಮಾಡ್ಲಿಕ್ಕ)
      ಇನ್ನೂ ಶಕ್ತಿ ಉಂಟು. ಮತ್ತೆ ಬಾಡಿಗೆ ವಿಚಾರ.ಈ
           ತಿಂಗಳಿಂದು ಆಗ್ಲೆಯ ಸಂದಾಯ ಮಾಡಿದ್ದೇನೆ.ಮುಂದಿನ
            ತಿಂಗಳಿಂದಕ್ಕೆ ಆಗ ಬನ್ನಿ....ಮತ್ತೆ ಯೂನಿಯನ್ ಸಂಗ್ತಿ
           ....ಸ್ವಲ್ಪ ಸುಮ್ಮಗಿದ್ರೆ ಒಳ್ಳೇದು.
    ಧನ :(ಸಿಟ್ಟುಗೊಂಡು ಹುಬ್ಬು ಹಾರಿಸುವನು)        ೧೨ / ನಾವೂ ಮನುಷ್ಯರು!
            
           ನೋಡುವ, ನೋಡುವ-ನಿಮ್ಮ ಪಿತ್ವ ಎಲ್ಲಿವರೆಗೆ ಏರ್ರ್ತ್
                    ದೇಂತ!....ಲಸ್ರಾದೋ! 
         (ಕೊಂಕಣಿ ಭಾಷೆಯಲ್ಲಿ) 
         ನೆನಪುಂಟಲ್ಲ್ವೊ? ಒಂದನೆ ತಾರೀಕಿಗೆ ಇಡಬೇಕು ಬಾಡಿಗೆ! 
         ನಿನ್ನ ಮನೆಯಿಂದ ಈಗ ಬಂದದ್ದಷ್ಟೇ ನಾನು. ಬಾಯಿ
                 ಒಬ್ಳೇ ಇದ್ಲು....
       (ಕಣ್ಣು ಕೆರಳಿಸಿ ಹಿಂದಿರುಗುವನು)
  ರಾಮಣ್ಣ : (ರಾಮಣ್ಣನನ್ನೂ  ಕಯನ್ನೂ ನೋಡುತ್ತ ಬೆಪ್ಪನಂತೆ
                  ನಿಂತಿದ್ದ ಲಾಸ್ರಾದೋನನ್ನು ಕುರಿತು)
         ಬಾಯಿ ಎಕ್ಲೀ  ಅಸ್ಲ್ಲಿ - ಒಬ್ಲೆ  ಇದ್ದಂತೆ. ಏನು ಪೊರ್ಬು
                ಗಳೇ....ನಾವು ಮನುಷ್ಯರು ಹೌದೋ ಅಲ್ಲವೋ....ಯಾವ 
               ತಪ್ಪಿಗೆ ಈ ಅವಮಾನದ ಮಾತು ಕೇಳ್ಳೇಕು? 
       (ಲಸ್ಸಾದೋ ಕುಳಿತುಕೊಳ್ಳುವನು.) 
      ಬಂದಾಗ ಎದ್ದು ನಿಲ್ಬೇಕಂತೆ....ಎದ್ದು ನಿಲ್ಲುವುದು- 
      ( ಹೊಟ್ಟೆಯನ್ನು ತೋರಿಸಿ)
     -ಈ ಉರಿ! 
     (ರುಕ್ಕು ಲಗುಬಗೆಯಿಂದ ಹೊರಗಿಂದ ಒಳಬರುವಳು)
 
 ರುಕ್ಕು : ಬಂದಿತ್ತಲ್ಲ ಬಾಡಿಗೆ ಯಜಮಾನರ ಸವಾರಿ?ಏನಂತೆ?
 ರಮಣ್ಣ : ಏನು? ಸಿಕ್ಥೊ ಹಾದಿಯಲ್ಲಿ?
 ರುಕ್ಕು:ಹೊಂ.ಹೀಗೆ-
     (ಅಣಕಿಸಿ) . . . . 
   ನೋಡಿತು.ಮುಂದಿನ ತಿಂಗಳ ಬಾಡಿಗೆ ಕೇಳ್ಳಿಕ್ಕೆ 
       ಬಂದದ್ದೂ?                                      
                                  ನಾವೂ ಮನುಷ್ಯರು! / ೧೩

ರಾಮಣ್ಣ : ಹಾಂ....

        (ಹೆಂಡತಿಯ ಕೈಕೆಡೆಗೆ ದೃಷ್ಟಿ ಹರಿಸಿ)
        ನೀನು ಹಾಗೇ ಬಂದಿಯಲ್ಲ. ಎಲ್ಲಿ ಉಂಟೇ ಕಟ್ಟಿಗೆ?

ರುಕ್ಕು  : ಸಿಕ್ಕಲಿಲ್ಲ....ಕತ್ತಲಾಗ್ತ బంತಲ್ಲ....ಶೆಟ್ಟರ ಡಿಪೋದಲ್ಲಿ

        ಬಾಗಿಲು.

ರಾಮಣ್ಣ : ಮತ್ತೆ - ರುಕು  : ಮತ್ತೆ, ಕಾಂತಪ್ಪಣ್ಣ ಇವತ್ತು ಮಿಟಿಂಗಿನಲ್ಲಿ ಹೇಳಿದ

        ಹಾಗೆ....ಬಂಗುಡೆ ತಂದು, ಸುಟ್ಟು ತಿನ್ನದೆ ಮಣ್ಣಲ್ಲಿ
        ಹೂಳಿಡೋದು!
ರಾಮಣ್ಣ :(ಆ ಮಾತನ್ನು ಮೆಚ್ಚಿದವನಂತೆ)
        ನೋಡಿ ಪೊರ್ಬುಗಳೆ ಎಂಥ ಮಾತು! ಬಂಗುಡೆ ತಂದು,
        ಸುಡಲಿಕ್ಕೆ ಬೆಂಕಿ ಇಲ್ಲಾಂತ ಮಣ್ಣಲ್ಲಿ ಹೂಳಬೇಕೆ? ಹೂಳ
        ಬೇಕೊ ಪೊರ್ಬುಗಳೆ? 
        (ಲಸ್ರಾದೋ ಕೂಡ ಮೆಚ್ಚುಗೆಯಿಂದ ತಲೆಯಾಡಿಸುವನು.)
        (ಮಗ ಕಿಟ್ಟು ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು "ఇಂಕ್ವಿಲಾಬ್
        ಜಿಂದಾಬಾದ್" ಎನ್ನುತ್ತ ಒಳಬರುವನು. ಕೈಯಲ್ಲೊಂದು 
        ಬುಟ್ಟಿ....)

ರಾಮಣ್ಣ :(ಕುಳಿತಿದ್ದಲ್ಲಿಂದಲೇ)

        ಏ-ಏನೋ ಇದು?
       (ರುಕ್ಕು ಹೆಮ್ಮೆಯಿಂದ ಮಗನನ್ನು ನೋಡುವಳು)

ಕಿಟ್ಟು  : ಶ್!! ಇದು ಮೆರವಣಿಗೆ! ಮಜೂರ ಸಂಘಕ್ಕೆ ಜಯ

        ವಾಗಲಿ!
       (ಪೊರ್ಬು ಟೊಪ್ಪಿ ಇಡುವನು. ತೆಗೆಯುವನು. ಕಿಟ್ಟು ಬುಟ್ಟಿ
        ಯನ್ನು ಮುಂದೆಮಾಡಿ.)
       ನೋಡಮ್ಮ ಒಣಗಿದ ಕಟ್ಟಿಗೆ ಚೂರು....ಮಧ್ಯಾಹ್ನ
       ಬುತ್ತಿ ಊಟ ಆದಮೇಲೆ ಇವನ್ನು ಒಟ್ಟುಮಾಡಿಟ್ಟೆ....                  
   ೧೪ | ನಾವೂ ಮನುಷ್ಯರು!
          
          ಸಾಯಂಕಾಲ ಮರತೇ ಹೋಯಿತು.ಮೆರವಣಿಗೆ ಒಟ್ಟಿಗೆ  
          ಓಡಿದ್ದೇ. ಪುನಃ ತಂದುಬಿಟ್ಟೆ .
         (ರುಕ್ಕು ಬುಟ್ಟಿಯನ್ನು ಎತ್ತಿಟ್ಟು, ಮಗನನ್ನು ತಬ್ಬಿಕೊಳ್ಳು
          ವಳು.)

ರಾಮಣ್ಣ : ನಮ್ಮ ಹಸಿ ಬಂಗುಡೆ ಈ ದಿನ ಬಿಸಿಯಾದೀತು....

ಕಿಟ್ಟು  : (ತಾಯಿಯಿಂದ ಬಿಡಿಸಿಕೊಂಡು)

        ಹೇಯ್! ನನಗೊಂದು ಪದ್ಯ ಗೊತ್ತುಂಟು:
        ಕಾಸಿಗೆ ಎರಡು ಬೆಳ್ಳುಳ್ಳಿ
        ಬಂಗುಡೆಮಿನಿಗೆ 
        ಸಂಗಡವಾದ
        ಅಂಗಡಿಯೊಳಗಿನ ಬೆಳ್ಳುಳ್ಳಿ

ರುಕ್ಕು  : ಕಾಸಿಗೆ ಎರಡು ಬೆಳ್ಳುಳ್ಳಿ ಇಲ್ಲವೆ ಇಲ್ಲ. ಈಗ ಅದರ

        ಅಗತ್ಯವೂ ಇಲ್ಲ.
        ಈ ಪದ್ಯ ಹೇಳು ಕಿಟ್ಟ-ಮಿಟಿಂಗ್ನಲ್ಲಿ ಹೇಳಿದ್ರಲ್ಲ ಅದು....
        (ತಾಯಿ ಮೊದಲು,ಮತ್ತೆ ತಾಯಿ ಮಗ ಜತೆಯಾಗಿ)
        ಊರಿನಲ್ಲಿ ದುಡಿವ ನಮಗೆ ಹೊಟ್ಟೆಗಿಲ್ಲದಾಗಿದೆ
        ಊರಹಂಚು ಮಾಡುವೆಮಗೆ ಮನೆಯೆ ಇಲ್ಲವಾಗಿದೆ ೧
        ದುಡಿವುದೊಂದೆ ಗೊತ್ತು ನಮಗೆ, ನಮ್ಮ ಬೆವರ
                             ಫಲವನು
        ದುಡಿಯದೆಯೇ ಕುಡಿದು ತಿಂಬ ಜಡಧನಿಕನು ಸುಲಿವನು ೨
        ನಮ್ಮದು ಹೊಲ ನಮ್ಮದು ನೆಲ ನಮ್ಮದಿಡೀ ರಾಜ್ಯವು
        ನಮ್ಮದನ್ನು ನಾವು ಪಡೆಯೆ ನಮಗೆ ಯಾರ ವ್ಯಾಜ್ಯವು?  ೩
        ಊರ ಸುಲಿವ ಚೋರತನದ ಪಾರುಪತ್ಯ ಈಗಿದೆ
        ಊರಿಗಿಲ್ಲ ಸುಖವು ಇದನ್ನು ವೀರತನದಿ ನೀಗದೆ       ೪                             ನಾವೂ ಮನುಷ್ಯರು!| ೧೫
            ಬನ್ನಿರಣ್ಣಗಳಿರ ದುಡಿವ ಜನಗಳೆಲ್ಲ ಈಗಲೇ ..
            ಬನ್ನಿರೆಮ್ಮ ರಾಜ್ಯಭಾರ ಸ್ಥಾಪಿಸಲ್ಕೆ ಬೇಗನೆ   ೫
           (ಪದ್ಯ ಮುಗಿಯುತ್ತಿದ್ದಂತೆ ಯೂನಿಯನಿನ ಕಾರ್ಯ 
            ದರ್ಶಿಯೂ ಆದಂ ಸಾಹೇಬರೂ ಬರುವರು.ರಾಮಣ್ಣ ಕಷ್ಟ
            ಪಟ್ಟಿದ್ದು “ನಮಸ್ಕಾರ”, “ಸಲಾಂ” ಎನ್ನುವನು.) 
           (ಬಂದ ఇಬ್ಬರು "ಲಾಲ್ ಸಲಾಂ", ಎನ್ನುವರು. ಪೊರ್ಬು,
            ರುಕ್ಷು ಎಲ್ಲರಿಗೂ ಸಂತೋಷ. ಕಿಟ್ಟು ಕಾರ್ಯದರ್ಶಿಯ 
            ಬಳಿಗೆ ಬರುವನು. ಕಾರ್ಯದರ್ಶಿಯು ಅವನ ಕೈಹಿಡಿದು 
            ಕೊಳ್ಳುವನು.)
ಕಾರ್ಯದರ್ಶಿ: ಏನು? ಹೇಗಿದ್ದೀರಿ ಎಲ್ಲ? ರಾಮಣ್ಣ, ಗುಣವಾಗ್ತಾ
            ಬಂತೊ?
     ರುಕು : ಹಾ೦. ಈಗ ನೆನಪಾಯ್ತು....ಸಭೆ ಮುಗಿದ ನಂತ್ರ
            ಅಧ್ಯಕ್ಷರೂ ನನ್ಹತ್ರ ಕೇಳಿದ್ರು "ರಾಮಣ್ಣನಿಗೆ
            ಹ್ಯಾಗುಂಟು?" ಅಂತ.
   ರಾಮಣ್ಣ: ಹಾ೦.  ನನಗೆ ಗೊತ್ತಿತ್ತು.ಕೇಳ್ದೆ ಇರೋದಿಲ್ಲಾಂತ
           ನನಗೆ ಗೊತ್ತಿತ್ತು
           (ಪೊರ್ಬು ಸಹಿತ ಎಲ್ಲರೂ ನಗುವರು.) 

ಕಾರ್ಯದರ್ಶಿ : ನೋಡಿ ರಾಮ್ಮಣ. ಈಗಲೇ ಕತ್ತಲೆ ಆಯ್ತು. ನಮ

           ಗಿನ್ನು ನೂರುಮನೆಗೆ ಹೋಗ್ಬೇಕು. ಈ ತಿಂಗಳ ಚಂದಾ
           ವಸೂಲಿಗೆ ಬಂದದ್ದು,  ಇಬ್ಬರದೂ ನಾಲ್ಕಾಣೆ.
          (ರುಕ್ಕು ಒಳಹೋಗುತ್ತಾಳೆ.)
  ರಾಮಣ್ಣ : ರುಕ್ಕೂ....ಹೇಳಿದ್ದು ಕೇಳಿಸಿತೊ?....ಎಲ್ಲಿದ್ದಿ?
    ರುಕ್ಕು :(ಬರುತ್ತೆ)
         ಓ-ಕರೆದಿರೊ? ಹಣ ತರಲಿಕ್ಕೆ ಹೋಗಿದ್ದೆ.    ೧೬ / ನಾವೂ ಮನುಷ್ಯರು!
    ರಾಮಣ್ಣ : ನೋಡಿ-ನೋಡಿ. ವೆಂಕಟರಮಣನ ಮುಡಿಪಿಗಿಂತಲೂ
              ಹೆಚ್ಚು ಪವಿತ್ರ ಈ ಎರಡೆರಡಾಣೆ.
       ಕಿಟ್ಟು: ಅಪ್ಪಾ, ನನ್ನದೂ ಎರಡಾಣೆ ಕೊಡು, ನಾನೂ ಮೆಂಬ
              ರಾಗ್ಬೇಕು.
             (ಎಲ್ಲರೂ ನಗುವರು.) 
  ಕಾರ್ಯದರ್ಶಿ: ಈಗ ನೀನು ಕೆಲಸಕ್ಕೆ ಹೋಗುವುದಿಲ್ಲವಲ್ಲ. ಕೆಲಸಕ್ಕೆ
             ಹೋಗಲಿಕ್ಕೆ ಶುರುಮಾಡಿದ ಮೇಲೆ ನೀನೂ ಮೆಂಬರು. 
             ಈ ವರ್ಷ ಶಾಲೆಗೆ ಬಾ. ಯುನೂನಿಯನ್ ಶಾಲೆಗೆ
             ಕಲೀಲಿಕ್ಕೆ, ಬರ್ತೀಯೊ?
             
       ಕಿಟ್ಟು: ಓ!
            (ರಾಮಣ್ಣ-ರುಕ್ಕು ಸಂತೋಷದಿಂದ ಪರಸ್ಪರ ದೃಷ್ಟಿ
             ವಿನಿಮಯ ಮಾಡಿಕೊಳ್ಳುವರು)
 ಕಾರ್ಯದರ್ಶಿ: ಇನ್ನು ನಾನು ಚಂದಾ ವಸೂಲಿಗೆ ಬರಲಿಕ್ಕಿಲ್ಲ. ನೀವೇ
             ತಂದುಕೊಡಬೇಕು. 
            (ರಶೀದಿ ಬರೆಯುತ್ತ) 
             ಈ ಸಲದ ರಶೀದಿ ಇಲ್ಲಿಯೇ ಕೊಡ್ತೇನೆ.
   ರಾಮಣ್ಣ : ಇನ್ನೇನು-ಇನ್ನೊಂದು ವಾರ ಬಿಟ್ಟು ನಾನೂ ಕೆಲಸಲಕ್ಕೆ
             ಬರುವವನೇ! 
     ಆದಂ : ನಾಡ್ದು ಮಿಟಿಂಗಿಂದೂ ಹೇಳಿಬಿಡಿ.
 ಕಾರ್ಯದರ್ಶಿ: ಹಾಂ..ಮಂಗಳವಾರ ಸಾಯಂಕಾಲ ದೊಡ್ಡ ಮೈದಾನಿ
            ನಲ್ಲಿ ಭಾರಿ ದೊಡ್ಡ ಸಭೆ ಉಂಟು....ರಷ್ಯಾದ ಕ್ರಾಂತಿ 
            ದಿನದ ಆಚರಣೆ. 
            (ರಾಮಣ್ಣನತ್ತ ನೋಡಿ)                          
                                                          ನಾವೂ ಮನುಷ್ಯರು!| ೧೭
            
            ಅವತ್ತು ಸೌಖ್ಯ ಇದ್ರೆ ನೀವೂ ಬನ್ನಿ....ರುಕ್ಮಕ್ಕ ಕಿಟ್ಟು
            ಬರಲೆಬೇಕು. ಹತ್ತಿರದ ಎಲ್ರನ್ನೂ ಸೇರಿಸಿ ಮೆರವಣಿಗೆ 
            ಯಲ್ಲಿ ಬನ್ನಿ. ಅವತ್ತು ಯಕ್ಷಗಾನ ಉಂಟು-ನಾಟಕ 
            ವುಂಟು-ಭಾಷಣ ಉಂಟು.
   ಕಿಟ್ಟು   : ಇಂಕ್ವಿಲಾಬ್ ಜಿಂದಾಬಾದ್ ಉಂಟು.

ಕಾರ್ಯದರ್ಶಿ  : (ನಗುತ್ತ)

            ಹಾ೦ ಹಾ೦-ಅದೂ ಉಂಟು.
           (ಲಸ್ರಾದೋ ಕಡೆತಿರುಗಿ)
            ಪೊರ್ಬುಗಳೆ, ಹ್ಯಾಗೆ ನಡೀತಿದೆ ನಿಮ್ಮ ಕಂಕನಾಡಿಯ
            ಮಗ್ಗದ ಯೂನಿಯನು? ಸದಸ್ಯ ಚಂದಾ ಎಲ್ಲ 
            ಕೊಟ್ಟಿದ್ದೀರೊ?
           (ಲಸ್ರಾದೋ ಮಾತನಾಡಲೆಂದು ಬಾಯಿ ತೆರೆಯುವಷ್ಟರಲ್ಲೆ)

ರಾನುಣ್ಣ  : ಓಹೋ! ಪೊರ್ಬುಗಳು ಬಹಳ ಉಮೇದಿನಿಂದ ಕೆಲಸ

           ಮಾಡ್ತಾ ಇದ್ದಾರೆ.... 

ಕಾರ್ಯದರ್ಶಿ : ಸಂತೋಷ. ಬರ್ತಿವೆ ಹಾಗಾದರೆ, ಲಾಲ್ ಸಲಾಂ!

           (ಕಾರ್ಯದರ್ಶಿ,ಆದಂ ಸಾಹೇಬ್ ಇಬ್ಬರೂ ಹೊರಡುವರು. 
           ರಾಮಣ್ಣ ಕೂತುಕೊಳ್ಳುವನು. ಪ್ರಸನ್ನತೆ. ಮತ್ತೆ ಹೊಟ್ಟೆ
           ನೋವು ಕೆಮ್ಮು....)

ರಾಮ್ಮಣ್ಣ  : (ಚೇತರಿಸಿಕೊಳ್ಳುತ್ತ)

           ಬಂದವರ ವಿದುರಲ್ಲಿ ಕೆಮ್ಮಲಿಲ್ಲವಲ್ಲ....ಅಷ್ಟಸಾಕು....
           ಅಮ್ಮ....ಆಯ್ಯೊ....ಪೂರ್ತಿ ಕತ್ತಲಾಯ್ತು....ಚಿಮಿಣಿ
           ಎಣ್ಣೆ ಏನಾದರೂ ಉಂಟೊ ರುಕ್ಕೂ ?
ರುಕ್ಕು    :  (ವಿಷಾದದ ನಗೆ ಬೀರುತ್ತೆ) ೧೮ | ನಾವೂ ಮನುಷ್ಯರು!
                       ಚೂರು ಸಾ ಇಲ್ಲ, ಕಿಟು ತಂದ ಕಟ್ಟಿಗೆ ಚೂರಿಂದ
                       ಬೆ೦ಕಿಯಾಗಬೇಕು;ಗ೦ಜಿ ಬೇಯಬೇಕು.
           ರಾಮಣ್ಣ : ಹೌದೊ ರುಕ್ಕು,ಪೊರ್ಬುಗಳು ನಿನ್ನನ್ನು ಕೇಳಿ ಬಂದದ್ದು.
                       ಬಾಯಿಯವರಿಗೆ - 
              ರುಕ್ಕು :ಗೊತ್ತು೦ಟು,ಗೊತ್ತು೦ಟು.ನೀವಿಬ್ಬರೂ ಇಲ್ಲಿರುವಾಗ,
                       ಕಟ್ಟಿಗೆಗೆ ಹೋದ ನಾನು ಬಾಯಿಯವರನ್ನು ಕಂಡಿದ್ದೆ. 
           ರಾಮಣ್ಣ : ಹಾ೦. ನೋಡಿ, ನನಗೆ ಗೊತ್ತಿತ್ತು....ಆದರೆ ಕಟ್ಟಿಗೆ
                       ಕೇಳಾಲಿಲ್ಲವಷ್ಟೆ  ಅಲ್ಲಿ?
         ಲಸ್ರಾಜೋ:(ಹಲ್ಲು ಗಳನೆಲ್ಲ ತೋರಿಸುತ್ತ) 
                       ಕಟ್ಟಿಗೆ ಅಲ್ಲಿ ಇದ್ದ ರಲ್ಲವೊ?
                      (ಎಲ್ಲರೂ ನಗುವರು)
              ರುಕ್ಕು : ನಾನು ಗಂಜಿ ಕುಡಿದು ರಾತ್ರೆಯೇ ಬರ್ರೇನೆ
                       ಪೊರ್ಬುಗಳೆ- 
                     . (ಲಸ್ರಾದೋ ಹೊರಡುವನು. ರುಕ್ಕು ಒಳಹೋಗುವಳು...
                        ರಾಮಣ್ಣ ಎದ್ದುನಿ೦ತು, ಕುಂಟುತ್ತ ಬೀಲಳ್ಕೊಡಲು 
                        ಹೊರಬಾಗಿಲವರೆಗೆ ಬರುವನು.....) 
           ರಾಮಣ್ಣ : ನೋಡಿ. ಇಲ್ಲವಾದ್ರೆ ಅವರಿಗೇನು ಕಡಿಮೆಯೋ?ಇ೦ಗ್ಲೀಷು
                       ಗೊತ್ತು೦ಟು,ಎಲ್ಲ ಉ೦ಟು.ಬಿ.ಎ. ಕಲ್ತವರಿಗೆ ಒ೦ದು ಮೂವತ್ತು ರೂಪಾಯಿ ಕೆಲಸ ಎಲ್ಲಿಯೂ ಸಿಕ್ಕ  
                       ಲಿಕ್ಕಿಲ್ಲವೊ? ಈ ಯೂನಿಯನ್ ಗೀನಿಯನ್ ಯಾಕೆ
                       ನಮ್ಮ ಕಾರ್ಯದರ್ಶಿಗೆ?
        ಲಸ್ರಾದೋ : ಹೌದು,ಹೌದು,
           ರಾಮಣ್ಣ : ಹಾ೦ - ಅದೇ, ಕಾಲ ಬದಲಾಗಿದೆ...ನಮ್ಮ ಜನಕ್ಕೆ
ಸಹಾಯ ಉ೦ಟು;ನಮ್ಮ ಜನ ಎದ್ದಿದ್ದಾರೆ. ಲಸ್ರಾದೋ:

ಹೌದು ಕಾಲ ಬದಲಾಗಿದೆ.

ರಾಮಣ್ಣ:

ನೋಡಿ - ಓಡಿನ ನಾನು, ಮಗ್ಗದ ನೀವು, ಬೀಡಿಯ

ಆದಂ ಸಾಹೇಬ್ರು - ನಾವೆಲ್ಲ ಒಂದೇ ಅಲ್ವೋ- ಒಂದೇ

ಗುರಿ ಅಲ್ವೋ? ನಾವೆಲ್ಲ ಕೇಳೋದೂ ಒ೦ದೇ. ಹೆಚ್ಚು

ಕೂಲಿ, ತುಟ್ಟಿಭತ್ತೆ, ಬೋನಸು, ನಮ್ಮ ರಾಜ್ಯ.

ಅಲ್ವೋ?ಹೌದೂ, ಅಲ್ವೋ?

ಲಸ್ರಾದೋ:

ಹೌದು,ನಾವೆಲ್ರೂ ಕೇಳೂವುದು ಒ೦ದೇ.

(ರ೦ಗದ ಖಕ್ಕಕ್ಕೆ ತಲಪಿದ ಮೇಲೆ,ಲಸ್ರಾದೋ ಟೊಪ್ಪಿ ತೆಗೆದು

"ಬರ್ತೇನೆ" ಎ೦ದು ನುಡಿದು,ಪುನಃ ಟೊಫ್ಫಿ ಇಡುವನು.

ರಮಣ್ಣ "ಹೋಗಿಬನ್ನಿ" ಎನ್ನುವನು.

ಕಿಟ್ಟು ತಿಟ್ಟಿಯ ಮೇಲಿದ್ದ ಹೊದಿಕೆಯನ್ನು ತ೦ದು ತ೦ದೆಗೆ

ಹೊದಿಸುನವನು.)

ಕಿಟ್ಟು:

ಅಪ್ಪಾ!ಛಳಿ ಉ೦ಟಪ್ಪಾ.......

ರುಕ್ಕು:

(ಒಳಗಿ೦ದ)

ಆ ಕತ್ತಲೆಯಲ್ಲಿ ಯಾಕೆ ಈಚೆಗೆ ಬರಬಾರದೆ? ಬೆಳಕು

ಮಾಡಿದ್ದೇನೆ.

(ಮುಂದೆ ನಡೆಯುತ್ತ ಕರೆದೊಯುವನು)

ಹೌದಪ್ಪಾ, ಇಲ್ಲಿ ಕತ್ತಲೆ....ಆಚೆ ಬೆಳಕಿದೆ.....ಮು೦ದೆ

ಹೋಗುವ.