ನಿರ್ವಿಕಾರಿಯ ಭಾವದಲ್ಲಿ ತೋರಿದ

ವಿಕಿಸೋರ್ಸ್ದಿಂದ



Pages   (key to Page Status)   


ನಿರ್ವಿಕಾರಿಯ ಭಾವದಲ್ಲಿ ತೋರಿದ ಗರ್ವ ಬಿಳಿಯ ಮದಗಜವ ಕಳೆವರೆ ಅರಳವಲ್ಲ ನೋಡಾ. ಬಿಳಿಯ ಮದಗಜದ ಶಿರವ ಉರಿಯ ಚರಣದಲ್ಲಿ ಮೆಟ್ಟಿ
ನಿರವನಯನನೆರೆದು ನಿಜಲಿಂಗೈಕ್ಯನಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.