ನೀ ಹುಟ್ಟಿಸಿದಲ್ಲಿ ಹುಟ್ಟಿ ನೀ ಕೊಂದಲ್ಲಿ ಸಾಯದೆ ಎನ್ನ ವಶವೆ ಅಯ್ಯಾ ನೀವಿರಿಸಿದಲ್ಲಿ ಇರದೆ ಎನ್ನ ವಶವೆ ಅಯ್ಯಾ ಅಕಟಕಟಾ ಎನ್ನವನೆನ್ನವನೆನ್ನಯ್ಯಾ ಕೂಡಲಸಂಗಮದೇವಯ್ಯಾ. 57